ಚಾಮರಾಜನಗರ : ಋಗ್ವೇದಿ ಯೂತ್ ಕ್ಲಬ್ ಹಾಗೂ ಜೈಹಿಂದ್ ಪ್ರತಿಷ್ಠಾನ ವತಿಯಿಂದ ವಿಶ್ವ ಶಿಕ್ಷಕರ ದಿನಾಚರಣೆ ಯನ್ನು ಆಚರಿಸಲಾಯಿತು. ಪಿಡಬ್ಲ್ಯೂಡಿ ಬಡಾವಣೆಯಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕರಾದ ವೆಂಕಟರಮಣಗೌಡರವರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.ವಿಶ್ವ ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯ ನಿವೃತ್ತ ಶಿಕ್ಷಕರಾದ ವೆಂಕಟರಮಣಗೌಡರವರನ್ನು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಸನ್ಮಾನಿಸಿ ಮಾತನಾಡಿ ಶಿಕ್ಷಕರು ಸಮಾಜದ ಮಾರ್ಗದರ್ಶಕರು. ಸಮಾಜದ ಅತ್ಯುನ್ನತ ಆಸ್ತಿಯಾಗಿದ್ದಾರೆ. ಅಕ್ಟೋಬರ್ 5 ವಿಶ್ವ ಶಿಕ್ಷಕರ ದಿನ. ಟಿ ನರಸೀಪುರದ ವಾಟಾಳ್, ಚಾಮರಾಜನಗರದ ಹರದನಹಳ್ಳಿ, ಪಟ್ಟಣದ ಪೇಟೆ ಶಾಲೆ, ನಂಜೆ ದೇವರಪುರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ವಿಶ್ರಾಂತ ಜೀವನವನ್ನು ನೆರವೇರಿಸುತ್ತಿರುವ 77 ವರ್ಷದ ವೆಂಕಟರಮಣಗೌಡರವರನ್ನು ಸನ್ಮಾನಿಸುತ್ತಿರುವುದು ನಮ್ಮ ಪುಣ್ಯ. ಸಾವಿರಾರು ವಿದ್ಯಾರ್ಥಿಗಳಲ್ಲಿ ಶಿಸ್ತು, ಪ್ರಾಮಾಣಿಕತೆ, ಪ್ರೀತಿ ವಿಶ್ವಾಸ ಸಾಂಸ್ಕೃತಿಕ, ಆಧ್ಯಾತ್ಮಿಕ,ಕ್ರೀಡೆ, ರಾಷ್ಟ್ರೀಯ ಮೌಲ್ಯಗಳನ್ನು ಬೆಳಸಿದ ವಿಶೇಷ ವ್ಯಕ್ತಿ ವೆಂಕಟರಮಣ ಗೌಡರು ಎಂದು ತಿಳಿಸಿದರು.
1979ರಲ್ಲಿ ಪಟ್ಟಣದ ಪೇಟೆ ಶಾಲೆ ಯಲ್ಲಿ 7 ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 9ನೇ ರಾಂಕ್ ಪಡೆದ ವಿದ್ಯಾರ್ಥಿ ಹಾಗೂ ಇಂಜಿನಿಯರ್ ಬೆಂಗಳೂರಿನ ಆರ್ ಸತೀಶ್ ತಮ್ಮ ಶಿಕ್ಷಕ ರಾ ಗಿದ್ದ ವೆಂಕಟರಮಣ ಗೌಡರ ಶಿಸ್ತು, ಪಾಠ, ಕಾರ್ಯಕ್ರಮ ರೂಪು ರೇಖೆ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದ ಮಾಹಿತಿಯನ್ನು ತಿಳಿಸಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ ವೆಂಕಟರಮಣ ಗೌಡ ರವರು ಮಾತನಾಡಿ, ಹಲವು ದಶಕಗಳ ಹಿಂದೆ ಶಿಕ್ಷಕನಾಗಿದ್ಧ ನನಗೆ ಬೆಂಗಳೂರಿನಿಂದ ಬಂದು ವಿಶ್ವ ಶಿಕ್ಷಕರ ದಿನದಲ್ಲಿ ಗೌರವಿಸಿರುವುದು ಬಹಳ ಸಂತೋಷವನ್ನು ತಂದಿದೆ. ಗುರುಭಕ್ತಿ, ಗುರುಗಳ ಬಗ್ಗೆ ಇರುವ ಪ್ರೀತಿ, ವಿಶ್ವಾಸ ಮರೆಯಲು ಸಾಧ್ಯವಿಲ್ಲ. ಜೀವನದ ಶಕ್ತಿ ಹೆಚ್ಚಿದೆ ಎಂದರು. ಋಗ್ವೇದಿ ಯೂತ್ ಕ್ಲಬ್ ಶ್ರಾವ್ಯ ಎಸ್ ಋಗ್ವೇದಿ, ಇದ್ದರು.