ಚಾಮರಾಜನಗರ: ಶ್ರೀ ತಗಡೂರು ರಾಮಚಂದ್ರ ರಾವ್ ರವರ ಜನ್ಮದಿನವನ್ನು ಅಕ್ಟೋಬರ್ 6 ಸಂಜೆ 5 ಗಂಟೆಗೆ ಜೈಹಿಂದ್ ಕಟ್ಟೆಯಲ್ಲಿ ಏರ್ಪಡಿಸಲಾಗಿದೆ ಎಂದು ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿ , ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರನ್ನು ಮೈಸೂರು, ಬದನವಾಳು ತಗಡೂರು ಗ್ರಾಮಗಳಿಗೆ ಕರೆತಂದ, ಲಕ್ಷಾಂತರ ಸ್ವಾತಂತ್ರ್ಯ ಪ್ರೇಮಿಗಳಲ್ಲಿ ಸ್ಪೂರ್ತಿ, ಪ್ರೇರಣೆಯನ್ನು ಶ್ರೀ ತಗಡೂರು ರಾಮಚಂದ್ರ ರಾವ್ ತುಂಬಿದ್ದರು. ಈ ಹಿನ್ನಲೆ ಅವರ ಜನ್ಮದಿನ ಆಚರಣೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.