Saturday, April 19, 2025
Google search engine

Homeಆರೋಗ್ಯಆಶ್ರಮ ಶಾಲೆ ಮಕ್ಕಳಿಗೆ ಉಚಿತ ಚಿಕಿತ್ಸೆ : ಡಾ. ಪುಷ್ಪವತಿ

ಆಶ್ರಮ ಶಾಲೆ ಮಕ್ಕಳಿಗೆ ಉಚಿತ ಚಿಕಿತ್ಸೆ : ಡಾ. ಪುಷ್ಪವತಿ

ಮೈಸೂರು:ಆಶ್ರಮ ಶಾ ಲೆಗಳಲ್ಲಿ ಓದುತ್ತಿರುವ ಬುಡಕಟ್ಟು ಜನರ ಮಕ್ಕಳಿಗೆ ಶ್ರವಣದೋಷವಿದ್ದರೆ ಉಚಿತ ಪರೀಕ್ಷೆ ಮತ್ತು ಉಚಿತ ಚಿಕಿತ್ಸೆ ನೀಡಲಾಗುವುದೆಂದು ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ. ಪುಷ್ಪವತಿ ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ವಾಕ್ ಮತ್ತು ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಹುಣಸೂರು ತಾಲ್ಲೂಕು ನಲ್ಲೂರುಪಾಲ ಆಶ್ರಮ ಶಾಲೆಯ ೪೨ ಮಕ್ಕಳ ಉಚಿತ ಚಿಕಿತ್ಸೆಗೆ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಿಗೆ ಶ್ರವಣದೋಷ ಕಂಡುಬoದಲ್ಲಿ ಪೋಷಕರು ಉದಾಸೀನ ಮಾಡದೆ ತಜ್ಞ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಬೇಕು. ಮಕ್ಕಳು ಕಿವಿಗೆ ಕಡ್ಡಿ ಹಾಕುವುದಾಗಲಿ, ಕೋಳಿಗರಿ ಹಾಕುವುದಾಗಲಿ, ಕಬ್ಬಿಣದ ಪಿನ್ನುಗಳನ್ನು ಹಾಕುವುದಾಗಲಿ ಮಾಡಬಾರದು ಎಂದು ಕಿವಿ ಮಾತು ಹೇಳಿದರು.
ಸಂವಹನ ನ್ಯೂನತೆಗಳ ತಡೆಗಟ್ಟುವಿಕೆ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ್ ಎಂ. ಮಾತನಾಡಿ ಆಶ್ರಮ ಶಾಲೆಗಳ ಮಕ್ಕಳಿಗೆ ಪ್ರಥಮವಾಗಿ ಉಚಿತ ಚಿಕಿತ್ಸೆ ನೀಡುತ್ತಿದ್ದೇವೆ. ಸಾಮಾನ್ಯ ಮಕ್ಕಳಲ್ಲಿ ಶೇ. ೨೦ ರಷ್ಟು ಕಿವಿಯಲ್ಲಿ ಸಮಸ್ಯೆಯಿದ್ದರೆ ಹಾಡಿಗಳ ಮಕ್ಕಳಲ್ಲಿ ಶೇ. ೫೦ರಷ್ಟು ಸಮಸ್ಯೆ ಇದ್ದು ಎರಡು ವಿಭಾಗಗಳು ಸಮನ್ವಯತೆಯಿಂದ ಚಿಕಿತ್ಸೆ ನೀಡಲಾಗುವುದು ಎಂದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾಅರಸ್ ಮಾತನಾಡಿ ಮೈಸೂರು ಜಿಲ್ಲೆಯ ಎಲ್ಲಾ ಆಶ್ರಯ ಶಾಲೆಗಳ ಮಕ್ಕಳಿಗೂ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದು ಸಮಸ್ಯೆ ಕಂಡು ಬಂದ ಮಕ್ಕಳ ಹೆಚ್ಚಿನ ಚಿಕಿತ್ಸೆಗೆ ವಾಕ್ ಮತ್ತು ಶ್ರವಣ ಸಂಸ್ಥೆಗೆ ಕರೆದುಕೊಂಡು ಬಂದಿದ್ದು ಮಕ್ಕಳಿಗೆ ಸಾರಿಗೆ ವೆಚ್ಚ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಡಾ. ಮಹಾದೇವಪ್ಪ, ಡಾ. ರವೀಶ್‌ಗಣಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular