Monday, April 21, 2025
Google search engine

Homeಅಪರಾಧಫ್ಯಾಕ್ಟರಿ ಮಾಲೀಕನಿಂದ 2 ಲಕ್ಷ ರೂ. ಸುಲಿಗೆ ಮಾಡಲು ಅಪಹರಣ ನಾಟಕ: ಆರೋಪಿಗಳ ಬಂಧನ

ಫ್ಯಾಕ್ಟರಿ ಮಾಲೀಕನಿಂದ 2 ಲಕ್ಷ ರೂ. ಸುಲಿಗೆ ಮಾಡಲು ಅಪಹರಣ ನಾಟಕ: ಆರೋಪಿಗಳ ಬಂಧನ


ಬೆಂಗಳೂರು: ಫ್ಯಾಕ್ಟರಿ ಮಾಲೀಕನಿಂದ 2 ಲಕ್ಷ ರೂ. ಸುಲಿಗೆ ಮಾಡುವ ಸಲುವಾಗಿ ಅಪಹರಣ ನಾಟಕ ವಾಡಿದ ವ್ಯಕ್ತಿ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಆರ್‌ ಟಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.  
ನಗರದಲ್ಲಿ ಲೋಹದ ಕಾರ್ಖಾನೆಯೊಂದನ್ನು ನಡೆಸುತ್ತಿರುವ ಮೊಹಮ್ಮದ್ ಆಸಿಫ್ ಹಬೀಬ್ (40) ಎಂಬುವರಿಗೆ ಸೆಪ್ಟೆಂಬರ್ 27 ರಂದು ಸಂಜೆ 5 ಗಂಟೆ ಸುಮಾರಿಗೆ ಕರೆ ಮಾಡಿದ್ದ ಉದ್ಯೋಗಿ ನುರುಲ್ಲಾ ಖಾನ್ (25) ತನ್ನನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿದ್ದು, ಕ್ಯಾಬ್ ನಲ್ಲಿ ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ಯಿದಿದ್ದಾರೆ. ಬಿಡುಗಡೆ ಮಾಡಲು ಅಪಹರಣಕಾರರು 2 ಲಕ್ಷ ರೂ. ಕೇಳುತ್ತಿದ್ದರು ಎಂದು ಹೇಳಿದ್ದಾನೆ. ಬಿಹಾರ ಮೂಲದ ಖಾನ್, ಏಳು ವರ್ಷಗಳಿಂದ ಆ ಕಾರ್ಖಾನೆಯಲ್ಲಿ ಕೆಲಸ ಮಾಡುವುದರ ಮೂಲಕ ಹಬೀಬ್ ಗೆ ಆಪ್ತನಾಗಿದ್ದ.

ಅದೇ ದಿನ ಆರ್‌ ಟಿ ನಗರ ಪೊಲೀಸ್ ಠಾಣೆಗೆ ಹಬೀಬ್ ನಾಪತ್ತೆ ದೂರು ದಾಖಲಿಸಿದ ನಂತರ ತನಿಖೆ ಪ್ರಾರಂಭವಾಗಿತ್ತು. ಆರೋಪಿ ತಾನಿರುವ ಸ್ಥಳದ ಗುರುತು ಸಿಗದಂತೆ ತನ್ನ ಫೋನ್ ನ್ನು ಸ್ವಿಚ್ ಆನ್ ಮತ್ತು ಆಫ್ ಮಾಡುತ್ತಲೇ ಇದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ (ಖಾನ್) ಹಬೀಬ್‌ ಗೆ ಕರೆ ಮಾಡಿ, ಆದಷ್ಟು ಬೇಗ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಹೇಳಿದ್ದಾನೆ. ಏನೋ ತಪ್ಪಾಗಿದೆ ಎಂದು ಶಂಕಿಸಿದ ಪೊಲೀಸರು, ಖಾನ್‌ ನನ್ನು ಅಪಹರಿಸಲಾಗಿದೆ ಎಂದು ಭಾವಿಸಲಾದ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅವನು ತಾನೇ ಕ್ಯಾಬ್‌ ಗೆ ಪ್ರವೇಶಿಸಿರುವುದು ಕಂಡುಬಂದಿದೆ.

ಹಬೀಬ್‌ ಗೆ ಕರೆ ಮಾಡಿದ ನಂತರ ಪೊಲೀಸರು ಖಾನ್ ಮಂಡ್ಯದಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ಸ್ಥಳೀಯ ಪೊಲೀಸರ ಸಹಾಯದಿಂದ ಆರ್‌ ಟಿ ನಗರ ಪೊಲೀಸರು ಖಾನ್ ಮತ್ತು ಬಿಹಾರ ಮೂಲದ ಅಬು ಬಕರ್ ಮತ್ತು ಅಲಿ ರಿಜಾಕ್ ಅವರನ್ನು ಬಂಧಿಸಿದ್ದು, ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರ್‌ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular