ಚಾಮರಾಜನಗರ :ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಸೋಲುಕಂಡಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲುಂಡ ಬಳಿಕ ತರೆಮರೆಯಲ್ಲಿದ್ದಾರೆ. ಈ ಮಧ್ಯೆ ಶ್ರೀರಾಮುಲು ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬುರತ್ತಿತ್ತು. ಆದರೆ ಇದಕ್ಕೆ ಖುದ್ದು ಬಿಜೆಪಿ ನಾಯಕ ಬಿ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಸ್ಪರ್ಧಿಸುವುದರ ಕುರಿತು ಯೋಚನೆ ಮಾಡಿಲ್ಲ. ನಾನು ಸ್ಪರ್ಧಿಸುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಯಾರಿಗೆ ಟಿಕೆಟ್ ನೀಡುತ್ತಾರೆ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ೨೫ಕ್ಕೂ ಅಧಿಕ ಸ್ಥಾನವನ್ನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಕುರಿತು ಮಾತನಾಡಿದ ಅವರು ಹಿರಿಯರ ನಿರ್ಧಾರ ಅಂತಿಮ ನಿರ್ಧಾರವಾಗಲಿದೆ. ಎಲ್ಲವನ್ನು ಅಳೆದು ತೂಗಿ ಮೈತ್ರಿ ಆಗಲಿದೆ. ಬಿಜೆಪಿಯಲ್ಲಿ ಉಸಿರು ಗಟ್ಟಿಸುವ ಪರಿಸ್ಥಿತಿ ಖಂಡಿತ ಇಲ್ಲ. ನಾವೆಲ್ಲ ಒಂದಾಗಿದ್ದೇವೆ ಚೆನ್ನಾಗಿದ್ದೇವೆ. ಲೋಕಸಬೆ ಚುನಾವಣೆ ಬಳಿಕ ಕಾಂಗ್ರೆಕ್ ಸರ್ಕಾರ ಪತನಗೊಳ್ಳುತ್ತೆ ಎಂಬ ವಿಚಾರವಾಗಿ ಮಾತನಾಡಿದ ಅವರು ೧೩೬ ಜನ ಶಾಸಕರಿದ್ದಾರೆ ಸರ್ಕಾರ ಬೀಳೋದೆಲ್ಲಿ ಎಂದು ಹೇಳಿದರು.