ಮಂಡ್ಯ: ಕಾಂಗ್ರೆಸ್ ವಿರುದ್ಧ ಜಯ ಕರ್ನಾಟಕ ಸಂಘಟನೆ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಪಕ್ಷದ ಸಂಘಟನಾ ಸಭೆ ನಡೆಯುತ್ತಿರುವ ಮಂಡ್ಯದ ಖಾಸಗಿ ಸಮುದಾಯ ಭವನದ ಮುಂದೆ ಪ್ರತಿಭಟನೆ ನಡೆಸಿದೆ.
ಕಾಂಗ್ರೆಸ್ಸಿಗರ ಸಭೆಗೆ ಮುತ್ತಿಗೆ ಹಾಕಲು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರ ಯತ್ನಿಸಿದ್ದಾರೆ.
ಜಿಲ್ಲಾ ಮಂತ್ರಿ, ಕೈ ಶಾಸಕರು, ಮುಖಂಡರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಕಾವೇರಿ ನೀರು ಬಿಡಲ್ಲ ಅಂತಾರೆ. ನಿತ್ಯವೂ ತಮಿಳುನಾಡಿಗೆ ಕಾವೇರಿ ನೀರು ಹೋಗ್ತಿದೆ. ಆದ್ರೂ ಸಚಿವರು, ಶಾಸಕರು, ಪಕ್ಷದ ಸಭೆಯಲ್ಲಿ ಬ್ಯುಸಿಯಾಗಿದ್ದಾರೆ. ಲೋಕಸಭಾ ಚುನಾವಣೆ ಬಗ್ಗೆ ಚಿಂತನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.