ಎಚ್ ಡಿ ಕೋಟೆ : ಪಟ್ಟಣದ ಕಾರ್ಯನಿರ್ವಾಹಣ ಅಧಿಕಾರಿಗಳ ಕಟ್ಟಡಕ್ಕೆ ಹೊಂದಿಕೊಂಡಿರುವ ಆರೋಗ್ಯ ಇಲಾಖೆಯ ವಸತಿಗೃಹಗಳು ನಿರ್ವಹಣೆ ಇಲ್ಲದೇ ಶಿಥಿಲಗೊಂಡು ಹಾಳೂರ ಕೊಂಪೆಯಂತಾಗಿವೆ.
ಆರೋಗ್ಯ ಇಲಾಖೆಯ ವೈದ್ಯರು, ನರ್ಸಗಳು ಮತ್ತು ಸಿಬ್ಬಂದಿಗಳು ಸ್ಥಳೀಯವಾಗಿ ಉಳಿದುಕೊಂಡು ಸಾರ್ವಜನಿಕರಿಗೆ ಸೇವೆ ಮಾಡಲಿ ಎನ್ನುವ ಉದ್ದೇಶದಿಂದ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಸುಮಾರು ಹತ್ತು ವಸತಿ ಗೃಹಗಳನ್ನು ನಿರ್ಮಿಸಿಲಾಗಿದೆ. ಇವುಗಳು ಅಧಿಕಾರಿಗಳಿಗೆ ತುಂಬಾ ಅನುಕೂಲಕರವಾಗಿತ್ತು.
ಆದರೆ ವಸತಿಗೃಹಗಳ ನಿರ್ವಹಣೆ ಇಲ್ಲದೇ ಇಂದು ಹಂದಿ, ನರಿ, ಹಾವು, ಚೇಳುಗಳ ವಾಸಸ್ಥಾನವಾಗಿದೆ. ಅಷ್ಟೆ ಅಲ್ಲ ಕಳ್ಳಕಾಕರ ಹಾಗೂ ಕುಡುಕರ ಕೇಂದ್ರವಾಗಿದ್ದು, ಅನೈತಿಕ ಚಟುವಟಿಕೆ ತಾಣವೂ ಆಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ನಾದರೂ ಶಿಥಿಲ ಕಟ್ಟಡಗಳತ್ತಾ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವರೇ ಎಂದು ಕಾದುನೋಡಬೇಕಾಗಿದೆ.