ಮಂಡ್ಯ: ಮಂಡ್ಯದಲ್ಲಿ ಕಾಂಗ್ರೆಸ್ ಸಮರ್ಥವಾಗಿದೆ. ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಖಚಿತ. ನಮ್ಮೆಲ್ಲರ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿದೆ ಎಂದು
ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಜೆಡಿಎಸ್ ಮೈತ್ರಿಯಾದ ಇತಿಹಾಸ ಇರಲಿಲ್ಲ. ದೇವೇಗೌಡರು ಮಾಜಿ ಪ್ರಧಾನಿಗಳು, ಗೌರವವಿದೆ.
ಮೈತ್ರಿ ಬಗ್ಗೆ ಕುಮಾರಸ್ವಾಮಿ ಮಾತನಾಡ್ತಾರೆ ಎಂದು ದೇವೇಗೌಡರು ಹೇಳಿದ್ರು. ಸುದ್ದಿಗೋಷ್ಠಿಯಲ್ಲಿ ದೇವೇಗೌಡರನ್ನ ಮಾತನಾಡಲು ಬಿಡಲಿಲ್ಲ. ಅಮಿತ್ ಶಾ ಮುಂದೆ ಹೋಗಿ ಅಲ್ಲೇ ಮೈತ್ರಿ ಘೋಷಣೆ ಮಾಡಿದ್ದಾರೆ ಎಂದು ಟೀಕಿಸಿದರು.
ಕಾವೇರಿ ವಿಚಾರವಾಗಿ ಕೇಂದ್ರ ಸ್ಪಂದಿಸಲು ತಯಾರಿಲ್ಲ.
ಬರದ ಪರಿಸ್ಥಿತಿ ಹೇಳಲು ಭೇಟಿಗೆ ಅವಕಾಶ ನೀಡುತ್ತಿಲ್ಲ.
ಇಂತಹವರು ಈಗ ಜೆಡಿಎಸ್ ಜೊತೆಯಾಗಿದ್ದಾರೆ.
ಇಬ್ಬರಿಗೂ ಒಬ್ಬರಿಗೊಬ್ಬರು ಅನಿವಾರ್ಯ.
ನಮಗೆ ಇವರು ಅನಿವಾರ್ಯ ಅಲ್ಲ, ಜನರು ಅನಿವಾರ್ಯ ಎಂದು ತಿಳಿಸಿದರು
ಕಾವೇರಿ ಬಗ್ಗೆ ಮಾತನಾಡುವ ಬಿಎಸ್‌ವೈ, ಬೊಮ್ಮಾಯಿ, ಹೆಚ್ಡಿಕೆ ಪ್ರಧಾನಿ ಬಳಿ ಹೋಗಬಹುದಿತ್ತು.
ಕಾಂಗ್ರೆಸ್ ಬಗ್ಗೆ ಅಲ್ಲ ರಾಜ್ಯದ ಹಿತಕ್ಕಾಗಿ ಮಧ್ಯಪ್ರವೇಶಿಸಿ ಎನ್ನಬಹುದಿತ್ತು ಎಂದು ತಿರುಗೇಟು ನೀಡಿದರು.
ಹೊಸ ಮದ್ಯದಂಗಡಿ ವಿಚಾರವಾಗಿ ಮಾತನಾಡಿ, ಎಲ್ಲಾ ವಿಚಾರಗಳು ಕ್ಯಾಬಿನೆಟ್ ಗೆ ಬರಲಿದೆ. ಅಲ್ಲಿ ಈ ಬಗ್ಗೆ ತೀರ್ಮಾನ ಆಗುತ್ತದೆ. ಯಾವ ಯಾವ ಸಂಧರ್ಭದಲ್ಲಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಿ ಕಾಂಟ್ರವರ್ಸಿ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ, ಡಿಸಿಎಂ ಮಧ್ಯೆ ಯಾವುದೇ ಗೊಂದಲ ಇಲ್ಲ.
ಸರ್ಕಾರದ ಯಾವುದೇ ಇಲಾಖೆಯಲ್ಲೂ ಗೊಂದಲ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಗ್ಯಾರಂಟಿ ಜಾರಿಗೊಳಿಸಿ ಅಭಿವೃದ್ಧಿಗೂ ಸರ್ಕಾರದಲ್ಲಿ ಹಣವಿದೆ. ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ನೀಡಲಾಗ್ತಿದೆ ಎಂದರು.
ಮಂತ್ರಿಯಾದ ಮೇಲೆ ಹೆಚ್ಡಿಕೆ ಕೊಟ್ಟಿದ್ದ 8ಸಾವಿರ ಕೋಟಿ ಅನುದಾನ ಹುಡುಕುತ್ತಿದ್ದೇನೆ. ಮಂಡ್ಯಕ್ಕೆ ಕೊಟ್ಟಿದ್ದ 8ಸಾವಿರ ಕೋಟಿ ಅನುದಾನ ಎಲ್ಲಿದೆ ಎಂದು ಅಧಿಕಾರಿಗಳಿಗೂ ಕೇಳಿದೆ. ಹೆಚ್ಡಿಕೆ ಅನುದಾನ ಇಟ್ಟಿದಿದ್ರೆ ನಮ್ಮ ಸರ್ಕಾರದಲ್ಲಿ ಜಾರಿಗೊಳಿಸಿಬಹುದಿತ್ತು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವ್ಯಂಗ್ಯ ವಾಡಿದರು.
104ಸೀಟು ಗೆದ್ದಾಗ ಆಪರೇಷನ್ ಕಮಲ ಮೂಲಕ ಸರ್ಕಾರ ಮಾಡಿದ್ರು. ಈಗ 136ಸ್ಥಾನ ಗೆದ್ದಿದ್ದೇವೆ.
ಅವರು ಹೇಳಿದಾಕ್ಷಣ ಸರ್ಕಾರ ಬಿಳೋಕೆ ನಾವೇನು ಕಳ್ಳೆಕಾಯಿ ತಿನ್ನುತ್ತಾ ಇರ್ತೀವಾ? ಎಂದು ಪ್ರಶ್ನಿಸಿದರು.
ಸರ್ಕಾರದ ವಿರುದ್ಧ ಶಾಮನೂರು ಹೇಳಿಕೆ ವಿಚಾರವಾಗಿ ಮಾತಾನಾಡಿ, ವೀರಶೈವ ಸಭಾದ ಅಧ್ಯಕ್ಷರಾಗಿದ್ದಾರೆ. ಸಭಾದ ಅಧ್ಯಕ್ಷರಾಗಿ ಅವರು ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಅವರು ಮಾತನಾಡಿಲ್ಲ.
ಎಲ್ಲಾ ಜಾತಿಯವರು ಒಟ್ಟಾಗಿದ್ದೇವೆ. ಅವರು ಹೇಳಿದ ರೀತಿ ನಮ್ಮಲ್ಲಿ ಇಲ್ಲ ಎಂದು ತಿಳವಾಡಿದರು
ಪಕ್ಷಕ್ಕಾಗಿ ಕೆಲಸ ಮಾಡಿದವರೇ ಅಭ್ಯರ್ಥಿಯಾಗಲಿದ್ದಾರೆ:
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಿಎಂ, ಡಿಸಿಎಂಗೆ ಬಿಟ್ಟಿದ್ದೇವೆ ಎಂದು ಮಂಡ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಸುಧಾಕರ್ ಹೇಳಿದರು.
ಕಾರ್ಯಕರ್ತರು, ಮುಖಂಡರು ಒಮ್ಮತದ ನಿರ್ಧಾರ ತಿಳಿಸಿದ್ದಾರೆ.
ಪಕ್ಕಕ್ಕಾಗಿ ಕೆಲಸ ಮಾಡಿದವರೆ ಅಭ್ಯರ್ಥಿ ಆಗಲಿದ್ದಾರೆ.
ಕಾಂಗ್ರೆಸ್ ಪಕ್ಷ ಗೆಲ್ಲಲು ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.