ಮೈಸೂರು: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಬಗ್ಗೆ ಚರ್ಚಿಸಿ, ಶೇಕಡಾ ೧೦೦ ರಷ್ಟು ಪ್ರಗತಿ ಸಾಧಿಸಲು ಕ್ರಮವಹಿಸುವಂತೆ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಎಂ ಗಾಯತ್ರಿ ಅವರು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಪಿಹೆಚ್‌ಸಿ-ಯುಹೆಚ್‌ಸಿ ಕಾರ್ಯಕ್ರಮ ಸಮುದಾಯ ಮಟ್ಟದಲ್ಲಿ ನೀಡುವಂತಹ ಆರೋಗ್ಯ ಸೇವೆಗಳಾದ ತಾಯಿ ಮತ್ತು ಮಕ್ಕಳ ಆರೋಗ್ಯ, ಮಾನಸಿಕ ಆರೋಗ್ಯ ಸೇವೆಗಳು ಹಾಗೂ ಇತರ ಸಂವಹನ ಕ್ರಿಯಾಶೀಲತೆ, ಅಸಾಂಕ್ರಮಿಕ ರೋಗಗಳಿಗೆ (ಹೆಚ್‌ಟಿ, ಡಿಎಮ್, ಕ್ಯಾನ್ಸರ್) ಸೇರಿದಂತೆ ಸಮುದಾಯದ ಮಟ್ಟದಲ್ಲಿ ಉಚಿತವಾಗಿ ಆರೋಗ್ಯ ಸೇವೆಗಳನ್ನು ಒದಗಿಸುವುದು. ಉಚಿತವಾಗಿ ಡಯಾಗ್ನೋಸ್ಟಿಕ್ಸ್, ಔಷಧಗಳು ಮತ್ತು ಅಗತ್ಯವಿರುವ ಸೇವೆಗಳನ್ನು ಸಮುದಾಯಕ್ಕೆ ಒದಗಿಸಲು ಮತ್ತು ತ್ವರಿತವಾಗಿ ಅನುಸರಣೆ ಮಾಡಲು, ಶೀಘ್ರವಾಗಿ ರೆಫರಲ್ ವ್ಯವಸ್ಥೆಯನ್ನು ಬಲಪಡಿಸಲು ಅನುಕೂಲವಾಗುತ್ತದೆ. ಹಾಗೂ ಸಾರ್ವಜನಿಕರು ಸರ್ಕಾರದಿಂದ ದೊರೆಯುವ ಉಚಿತ ಆರೋಗ್ಯ ಸೇವೆಗಳ ಸದೋಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು. ಸಿಪಿಹೆಚ್‌ಸಿ-ಯುಹೆಚ್‌ಸಿ ಕಾರ್ಯಕ್ರಮದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಟ್ಯಾಬ್ಲೆಟ್ ಮೊಬೆಲ್ ಅನ್ನು ವಿತರಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಕುಮಾರಸ್ವಾಮಿ ಪಿ.ಸಿ ಸೇರಿದಂತೆ ಇತರರು ಉಪಸ್ಥಿತರಿದ್ದರು.