ಕೆ.ಆರ್.ನಗರ: ದಿನ ಪತ್ರಿಕೆ ಹಂಚಿಕೆ ಮಾಡುವವರನ್ನು ಬೀದಿ ವ್ಯಾಪಾರಿಗಳೆಂದು ಪರಿಗಣಿಸಿ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ ಇದರ ಸದುಪಯೋಗ ಪಡೆಯಿರಿ ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ತಿಳಿಸಿದರು.
ಪುರಸಭೆಯಲ್ಲಿ ನಡೆದ ಪತ್ರಕರ್ತರು ಮತ್ತು ಪತ್ರಿಕೆ ವಿತರಕರ ಜೊತೆ ಸಭೆ ನಡೆಸಿ ಮಾತನಾಡಿದರು.
ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿಎಂ ಸ್ವ-ನಿಧಿ) ಯೋಜನೆಯಡಿ ಶೇಕಡ ೭% ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಕೊಡಿಸಲಾಗುವುದು.ಮೊದಲ ಕಂತಿನ ಕಿರು ಸಾಲ ಸೌಲಭ್ಯ ರೂ.10,000, 2ನೇ ಕಂತಿನ ರೂ.20,000/- ಹಾಗೂ 3ನೇ ಕಂತಿನ ರೂ.50,000/- ಗಳನ್ನು ವಿವಿಧ ಬ್ಯಾಂಕುಗಳ ಮೂಲ ಒದಗಿಸಲಾಗಿತ್ತದೆ ಎಂದು ಪ್ರಕಟಿಸಿದರು. ಪೂರ್ಣ ಪ್ರಮಾಣದಲ್ಲಿ ಸಾಲವನ್ನು ಮರುಪಾವತಿ ಮಾಡಿದವರಿಗೆ ಶೇಕಡ ೪ % ಬಡ್ಡಿಯನ್ನು ವಾಪಸ್ಸ್ ಕೊಡಲಾಗುತ್ತದೆ ಆದ್ದರಿಂದ ತಪ್ಪದೇ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು. ನಗರ ಪ್ರದೇಶಗಳಲ್ಲಿ ದಿನ ಪತ್ರಿಕೆ’ ಹಂಚಿಕೆ ಮಾಡುವವರನ್ನು ಪಿಎಂ ಸ್ವ-ನಿಧಿಯ ಫಲಾನುಭವಿಗಳೆಂದು ಪರಿಗಣಿಸಿ ಈ ಕೆಳಕಂಡ ನಿಯಮವನ್ನು ಅನುಸರಿಸುವ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಎಂದರು
ಪ್ರಧಾನ ಮಂತ್ರಿ ಸ್ವ-ನಿಧಿಯ ಸಾಲ ಸೌಲಬ್ಯವನ್ನು ಈಗಾಗಲೇ ಪಟ್ಟಣದಲ್ಲಿ ರಸ್ಯೆ ಬದಿ ವ್ಯಾಪರ ಮಾಡುತ್ತಿರುವ 7೦೦ ಮಂದಿಯನ್ನು ಪುರಸಭೆ ಗುರುತಿಸಿ ಗುರುತಿನ ಚೀಟಿ ವಿತರಿಸಿ ವಿವಿದ ಬ್ಯಾಂಕುಗಳಿಂದ ತಲಾ 1೦ ಸಾವಿರ ಸಾಲ ಸೌಲಭ್ಯ ಕೊಡಿಸಲಾಗಿದ್ದು, ೫೦ ಮಂದಿಗೆ ಎರಡನೇ ಕಂತಿನ ಹಣ 2೦ ಸಾವಿರ ಹಾಗೂ 3೦ ಮಂದಿಗೆ ಮೂರನೇ ಕಂತಿನ ಹಣ 5೦ ಸಾವಿರ ಕೊಡಿಸಲಾಗಿದೆ ಎಂದು ತಿಳಿಸಿದರು.