ಪಿರಿಯಾಪಟ್ಟಣ: ತಾಲ್ಲೂಕು ಶ್ರೀ ಯೋಗಿ ನಾರೇಯಣ ಬಲಿಜ(ಬಣಜಿಗ) ಸಂಘದ ಉದ್ಘಾಟನೆ ಹಾಗೂ ತಾಲ್ಲೂಕು ಮಟ್ಟದ ವಿಭಾಗೀಯ ಸಮಾವೇಶ ಅ.8 ರಂದು ಪಟ್ಟಣದಲ್ಲಿ ನಡೆಯಲಿದೆ.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರು ಉದ್ಘಾಟಿಸಲಿದ್ದು ಬೆಂಗಳೂರು ಸೆಂಟ್ರಲ್ ಸಂಸದರಾದ ಪಿ.ಸಿ ಮೋಹನ್ ಸಮಾವೇಶ ಉದ್ಘಾಟಿಸುವರು.
ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣ ಭಾವಚಿತ್ರಕ್ಕೆ ಬೆಂಗಳೂರಿನ ನ್ಯೂ ಬಾಲ್ಡ್ ವಿನ್ ವಿದ್ಯಾಸಂಸ್ಥೆ ಸಂಸ್ಥಾಪಕರು ಹಾಗೂ ಕರ್ನಾಟಕ ರಾಜ್ಯ ಬಲಿಜ ಸಂಘ ಅಧ್ಯಕ್ಷರಾದ ಡಾ.ಟಿ.ವೇಣುಗೋಪಾಲ್ ಪುಷ್ಪಾರ್ಚನೆ ಮಾಡಲಿದ್ದಾರೆ. ಬೆಂಗಳೂರಿನ ಸಮಾಜ ಸೇವಕರಾದ ಮಮತ ದೇವರಾಜ್ ಅವರು ಸಾಧಕರನ್ನು ಸನ್ಮಾನಿಸಲಿದ್ದು ಮಹಾರಾಜ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಡಾ. ಎಸ್.ಕೃಷ್ಣಪ್ಪ ಪ್ರಸ್ತಾವಿಕ ನುಡಿಗಳನಾಡಲಿದ್ದಾರೆ, ಸಮಾಜದ ತಾಲೂಕು ಅಧ್ಯಕ್ಷ ಎನ್.ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಸಿ ಪುಟ್ಟಸಿದ್ದಶೆಟ್ಟಿ, ಟಿ.ಕೆ.ಚಿನ್ನಸ್ವಾಮಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ ವೆಂಕಟೇಶ್, ಮಂಡ್ಯ ಡಯಟ್ ಉಪನಿರ್ಧೇಶಕರಾದ ಪುರುಷೋತ್ತಮ್, ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ದೇವರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ಸುಬ್ರಹ್ಮಣ್ಯ, ಬಿ.ಪಿ ಮಂಜುನಾಥ್, ಬಿ.ಪಿ ಲೋಕೇಶ್, ಎಸ್. ದಿವಾಕರ್, ಹೇಮಂತ್ ಕುಮಾರ್, ದಯಾನಂದ್ ಬಾಬು, ಕೆ.ಆರ್ ನಗರ ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಭೇರ್ಯ ಮಹೇಶ್ ಸೇರಿದಂತೆ ಸಮಾಜದ ಅನೇಕ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿದ ಸಂಘ ಸಂಸ್ಥೆ ಸದಸ್ಯರು, ಬಲಿಜ ಸಮಾಜ ಮುಖಂಡರು ಭಾಗವಹಿಸಲಿದ್ದಾರೆ.
