ಮದ್ದೂರು: ಮದ್ದೂರಿನಲ್ಲಿ ಅಭಿಮಾನಿಗಳಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು, ರಕ್ತದಾನ ಶಿಬಿರ ನಡೆಸುತ್ತಿರುವುದು ಖುಷಿ ತಂದಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಕಾವೇರಿ ವಿಚಾರದಲ್ಲಿ ಸರ್ವ ಶಾಸಕರು ದೆಹಲಿಗೆ ತೆರಳುವ ನಿರ್ಧಾರ ಮಾಡಿದ್ದೇವೆ. ಕಾವೇರಿ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ.
ಶೀಘ್ರದಲ್ಲೇ ಸರ್ವ ಪಕ್ಷ ನಿಯೋಗ ಮನವಿ ಸಲ್ಲಿಸಲಿದೆ, ಈಗಾಗ್ಲೇ ಸರ್ಕಾರ ಕೂಡ ತೀರ್ಮಾನ ಮಾಡಿದೆ.
ಜಾನುವಾರು, ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ಎಲ್ಲಾ ಕೆರೆ ಕಟ್ಟೆ ತುಂಬಿಸಬೇಕು. ಕಾವೇರಿ ವಿಚಾರವಾಗಿ ಮುಂದಿನ ಹೋರಾಟಕ್ಕೂ ಈಗಿನಿಂದಲೇ ಸಿದ್ದತೆ ನೆಡೆಸಿದೆ. ಈ ವೇಳೆ ಮುಖಂಡರಾದ ಅಲೋಕ್ , ಬಸವರಾಜು, ಶಂಕರೇಗೌಡ ಸೇರಿದಂತೆ ಇತರರು ಹಾಜರಿದ್ದರು.
