ಹನೂರು : ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವ ಭೋವಿ ಸಮುದಾಯಕ್ಕೆ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ ಹನೂರು ಪಟ್ಟಣದಲ್ಲಿ ಭೋವಿ ಸಮುದಾಯದ ಜಿಲ್ಲಾ ಗೌರವ ಅಧ್ಯಕ್ಷ ರಾಜಣ್ಣ ತಿಳಿಸಿದರು.
ಹನೂರು ಪಟ್ಟಣದಲ್ಲಿ ಇಂದು ಭಾನುವಾರದಂದು ನೆಡೆದ ಭೋವಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು ಹನೂರು ತಾಲೂಕಿನಲ್ಲಿಯೆ ಸುಮಾರು ೨೦ ಸಾವಿರ ಮಂದಿ ಭೋವಿ ಸಮುದಾಯದ ಜನತೆಯ ವಾಸ ಮಾಡುತ್ತಿದ್ದಾರೆ ಈಗಿರುವಾಗ ಅಧಿಕಾರಿಗಳ ತಪ್ಪು ಲೆಕ್ಕಚಾರದ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಕೇವಲ ೭,೦೦೦ ಮಂದಿ ಭೂವಿ ಜನತೆ ಇದ್ದಾರೆ ಎಂದು ನಮ್ಮ ಸಮುದಾಯ ಜನತೆಗೆ ಸಮರ್ಪಕವಾಗಿ ಸರ್ಕಾರದ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು
ಇಂದಿಗೂ ಕಡು ಬಡತನದಿಂದ ದಿನ ದೂಡುತ್ತ ಮೂಲ ಕಸವನ್ನೇ ಅವಲಂಬಿತರಾಗಿರುವ ನಮ್ಮ ಭೋವಿ ಸಮುದಾಯಕ್ಕೆ ಸರ್ಕಾರದಿಂದ ಸಮರ್ಪಕ ಸರ್ಕಾರದ ಸವಲತ್ತುಗಳನ್ನು ಒದಗಿಸಲು ನಮ್ಮ ಸಂಘದ ಮುಖಾಂತರ ಪ್ರತಿ ಹಳ್ಳಿಗಳು ಸಹ ತೆರಳಿ ಕ್ರಮಬದ್ಧವಾಗಿ ನಾವೇ ನಮ್ಮ ಸಮುದಾಯದ ಜನಗಣತಿಯನ್ನು ಮಾಡಿ ಆ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.