Monday, April 21, 2025
Google search engine

Homeರಾಜ್ಯಸುದ್ದಿಜಾಲನಾಯಕ ನೌಕರರ ಸಂಘ ಮತ್ತು ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ

ನಾಯಕ ನೌಕರರ ಸಂಘ ಮತ್ತು ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ

ಕೆ.ಆರ್.ನಗರ: ಪರಿಶಿಷ್ಟ ಪಂಗಡದವರಿಗೆ ಶೇ.೭.೫ರಷ್ಟು ಮೀಸಲಾತಿ ಸೌಲಭ್ಯ ನೀಡುವಂತೆ ಮುಖ್ಯಮಂತ್ರಿಗಳಿಗೆ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದಾರೆ ಎಂದು ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್‌ ಚಿಕ್ಕಮಾಧು ಹೇಳಿದರು.

ಪಟ್ಟಣದ ನಾಯಕ ವಾಲ್ಮೀಕಿ ಸಮುದಾಯ ಭವನದಲ್ಲಿ ನಾಯಕ ನೌಕರರ ಸಂಘ ಮತ್ತು ವಾಲ್ಮೀಕಿ ನಾಯಕರ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಎಲ್ಲರಿಗೂ ಎಸ್‌ಟಿ ಪ್ರಮಾಣ ಪತ್ರ ಕೊಡಿಸಲು ಬೇಕಾಗಿರುವ ಕಾನೂನು ತೊಕಡುಗಳನ್ನು ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ನನ್ನ ಪೂಜ್ಯ ತಂದೆಯವರಾದ ಚಿಕ್ಕಮಾಧುರವರ ನಿಧನದ ನಂತರ ರಾಜಕೀಯ ಅಧಿಕಾರ ಪಡೆಯಲು ಮತ್ತು ಕೋಟೆ ಕ್ಷೇತ್ರದಿಂದ ಶಾಸಕನಾಗಲು ಡಿ.ರವಿಶಂಕರ್‌ರವರ ಸಹಕಾರ ಬಹಳ ಪ್ರಮುಖವಾದ್ದದ್ದು ಶಾಸಕ ಡಿ.ರವಿಶಂಕರ್‌ರವರ ಜೊತೆ ನಮ್ಮ ಸಮುದಾಯದ ಮುಖಂಡರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿ ಹೆಚ್.ಡಿ.ಕೋಟೆ ಕ್ಷೇತ್ರದಿಂದ ಸ್ಪರ್ದಿಸಲು ಅವಕಾಶ ಕಲ್ಪಿಸಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿದಂತೆ ಹಿಂದುಳಿದ ವರ್ಗಗಳ ಏಳಿಗೆಗಾಗಿ ದುಡಿಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಮುದಾಯದವರು ಬೆಂಬಲ ನೀಡಬೇಕು ಎಂದು ಕೋರಿದ ಅನಿಲ್‌ಚಿಕ್ಕಮಾಧು ಮುಖ್ಯಮಂತ್ರಿಗಳ ಹಾದಿಯಲ್ಲೇ ನಡೆಯುತ್ತಿರುವ ಶಾಸಕ ಡಿ.ರವಿಶಂಕರ್‌ರವರಿಗೆ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಡಿ.ರವಿಶಂಕರ್ ಮಾತನಾಡಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ನಾಯಕ ಸಮಾಜದ ನಾಯಕರಾಗಿದ್ದ ಚಿಕ್ಕಮಾಧುರವರ ನಿಧನದ ನಂತರ ಅನಿಲ್‌ಚಿಕ್ಕಮಾಧುರವರಿಂದ ನಾಯಕತ್ವ ಬಯಸಿರುವ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಶಾಸಕ ಅನಿಲ್‌ಚಿಕ್ಕಮಾಧುರವರಿಗೆ ಸರ್ಕಾರ ಉತ್ತಮವಾದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಿದ್ದು ಆನಂತರ ಸಚಿವರನ್ನಾಗಿಯೂ ಮಾಡಲಿದೆ ಎಂದು ಮಾಹಿತಿ ನೀಡಿದ ಶಾಸಕ ಡಿ.ರವಿಶಂಕರ್ ಇದರಿಂದ ಸಮಾಜದವರ ಬೇಡಿಕೆಗಳನ್ನು ಈಡೇರಿಸಲು ಸಹಕಾರಿಯಾಗಲಿದೆ ಎಂದರಲ್ಲದೆ ಕ್ಷೇತ್ರದ ಅಭಿವೃದ್ದಿಗಾಗಿ ಅನಿಲ್‌ಚಿಕ್ಕಮಾಧುರವರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಈ ಸಮುದಾಯ ಭವನಕ್ಕೆ ದೇವಾಲಯ ನಿರ್ಮಾಣ ಮಾಡಲು ಬೇಕಾಗಿರುವ ೫ ಲಕ್ಷ ಅನುದಾನ ಕೊಡಿಸಲಾಗುತ್ತದೆ, ಸಾಲಿಗ್ರಾಮ ಪಟ್ಟಣದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ಮಂಜೂರಾತಿ ಮಾಡಿಸುವುದರ ಜತೆಗೆ ಭವನ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ೧೮ ವಾಲ್ಮೀಕಿ ಸಮುದಾಯ ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಮುಂದುವರೆದ ಕಾಮಗಾರಿಗೆ ಅನುದಾನ ಕೊಡಿಸಿ ಭವನಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುತ್ತದೆ ಎಂದು ಹೇಳಿದರು. ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ನರಸಿಂಹನಾಯಕ, ಹಿರಿಯ ಮುಖಂಡ ಬೆಟ್ಟನಾಯಕ ಮಾತನಾಡಿದರು.

ಇಬ್ಬರು ಶಾಸಕರನ್ನು ಸಮಾಜದ ವತಿಯಿಂದ ಅಭಿನಂದಿಸಲಾಯಿತು. ಕೆ.ಆರ್.ನಗರ ತಾಲೂಕು ಅಧ್ಯಕ್ಷ ನರಸಿಂಹ ನಾಯಕ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಮಾದನಾಯಕ, ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಸಿದ್ದೇಶ್ವರಪ್ರಸಾದ್, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ, ಶಿಕ್ಷಣ ಸಂಯೋಜಕರಾದ ದಾಸಪ್ಪ, ಕಿರಣ್‌ಕುಮಾರ್, ಸಂಘದ ಕಾರ್ಯದರ್ಶಿ ಪರಮೇಶ್, ಟಿಎಪಿಸಿಎಂಎಸ್ ನಿರ್ದೇಶಕ ತೋಟಪ್ಪನಾಯಕ, ಪುರಸಭೆ ಸದಸ್ಯ ಶಿವುನಾಯಕ್, ಮುಖಂಡರಾದ ಕಲ್ಲಹಳ್ಳಿಶ್ರೀನಿವಾಸ್, ರಾಜನಾಯಕ, ಮಹದೇವನಾಯಕ, ಸಿದ್ದನಾಯಕ, ಲೋಹಿತ್, ಜ್ಯೋತಿಕುಮಾರ್, ಕೆ.ವಿ.ರಮೇಶ್, ಮುಖಂಡ ಚುಂಚನಕಟ್ಟೆ ಮಣಿಕಂಠ,ತಂದ್ರೆಗಿರೀಶ್,ವೆಂಕಟೇಶ್, ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular