ಪಿರಿಯಾಪಟ್ಟಣ: ಸಣ್ಣಪುಟ್ಟ ಸಮಾಜಗಳ ಜನರು ಒಗ್ಗಟ್ಟಾಗುವುದರಿಂದ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಯೋಗಿ ನಾರೇಯಣ ಬಲಿಜ (ಬಣಜಿಗ) ಸಂಘ ಉದ್ಘಾಟಿಸಿ ಅವರು ಮಾತನಾಡಿದರು, ರಾಜ್ಯ ಸಂಘದ ಪದಾಧಿಕಾರಿಗಳು ಹಲವು ಸಮಸ್ಯೆಗಳನ್ನು ನನ್ನ ಮುಂದಿಟ್ಟಿದ್ದಾರೆ ಇದನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅವರಿಗೆ ಮನವರಿಕೆ ಮಾಡಿಕೊಟ್ಟು ಬಲಿಜ ಸಮಾಜದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು, ಹಣವುಳ್ಳವರೆಲ್ಲರೂ ಸಮಾಜ ಸೇವೆ ಮಾಡುವ ಮನಸ್ಸು ಮಾಡುವುದಿಲ್ಲ ಆದಾಯ ದ್ವಿಗುಣ ಮಾಡುವತ್ತ ಗಮನಹರಿಸುತ್ತಾರೆ ಆದರೆ ರಾಜ್ಯ ಬಲಿಜ ಸಂಘದ ಅಧ್ಯಕ್ಷರಾದ ಟಿ.ವೇಣುಗೋಪಾಲ್ ಅವರ ಸಾಮಾಜಿಕ ಕಾರ್ಯ ಶ್ಲಾಘನಿಯ, ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ತಾಲ್ಲೂಕಿನ ಬಲಿಜ ಸಮುದಾಯಕ್ಕೆ ಸಿಗುವಂತೆ ಮಾಡುತ್ತೇನೆ ಎಂದರು.
ರಾಜ್ಯ ಬಲಿಜ ಸಂಘದ ಅಧ್ಯಕ್ಷರಾದ ಟಿ.ವೇಣುಗೋಪಾಲ್ ಮಾತನಾಡಿ 1994 ರಿಂದ 18 ವರ್ಷಗಳ ಕಾಲ ಬಲಿಜ ಜಾತಿಯನ್ನು 2ಎ ವರ್ಗದಿಂದ 3ಎ ವರ್ಗಕ್ಕೆ ಬದಲಾಯಿಸಲಾಗಿತ್ತು ಇದರಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೂಕ್ತ ಮೀಸಲಾತಿ ಪಡೆಯಲು ಸಾಧ್ಯವಾಗದೆ ಪರಿತಪಿಸಬೇಕಾಯಿತು. ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ನಂತರ ಮತ್ತೆ ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ 2ಎ ವರ್ಗಕ್ಕೆ ನಮ್ಮ ಸಮಾಜವನ್ನು ಸೇರಿಸಿದ್ದಾರೆ ಮುಂದಿನ ದಿನಗಳಲ್ಲಿ ಉದ್ಯೋಗದ ಉದ್ದೇಶಕ್ಕಾಗಿಯೂ ಸಹ ಇದೇ ವರ್ಗದಲ್ಲಿ ನಮ್ಮನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವರು ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಕೆ.ಚಿನ್ನಸ್ವಾಮಿ, ಸಮಾಜ ಸೇವಕಿ ಮಮತಾ ದೇವರಾಜ್ ಮಾತನಾಡಿದರು,
ಬಲಿಜ ಸಮಾಜದ ಪ್ರತಿಭಾನ್ವಿತರು ಮತ್ತು ಹಿರಿಯರಾದ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.
ಬಲಿಜ ಸಮಾಜ ತಾಲೂಕು ಅಧ್ಯಕ್ಷ ಜಗದೀಶ್ ಕಿತ್ತೂರು, ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ದೇವರಾಜು, ವಿವಿಧ ಸಂಘಗಳ ಪದಾಧಿಕಾರಿಗಳಾದ ಡಾ.ಎಸ್ ಕೃಷ್ಣಪ್ಪ, ದೇವರಾಜ್, ಗೀತಾ ನಾಯ್ಡು, ಸುಬ್ರಹ್ಮಣ್ಯ, ನಾರಾಯಣ, ಗೀತಾಸುಬ್ರಹ್ಮಣ್ಯ, ರಘು, ಮುನಿಕೃಷ್ಣ, ಬಾಲಾಜಿ, ಡಾ.ಎಸ್ ದಿವಾಕರ್, ದಯಾನಂದ್, ಬಾಬು, ಜಗದೀಶ್, ಸುಬ್ರಹ್ಮಣ್ಯ, ವೆಂಕಟೇಶ್, ರಮೇಶ್, ಭೋಗೇಶ್ ಸೇರಿದಂತೆ ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.
