Sunday, April 20, 2025
Google search engine

Homeರಾಜ್ಯಸುರತ್ಕಲ್ ಎಂ.ಆರ್.ಪಿ.ಎಲ್’ನ ಚತುಷ್ಪಥ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ: ಡಿವೈಎಫ್’ಐಯಿಂದ ರಸ್ತೆ ತಡೆ, ಪ್ರತಿಭಟನೆ

ಸುರತ್ಕಲ್ ಎಂ.ಆರ್.ಪಿ.ಎಲ್’ನ ಚತುಷ್ಪಥ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ: ಡಿವೈಎಫ್’ಐಯಿಂದ ರಸ್ತೆ ತಡೆ, ಪ್ರತಿಭಟನೆ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಸುರತ್ಕಲ್ ಎಂ.ಆರ್.ಪಿ.ಎಲ್ 4.5ಕಿಮೀ ಚತುಷ್ಪಥ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತಿದ್ದರೂ ಶಾಸಕ ಭರತ್ ಶೆಟ್ಟಿ ಮೌನವಾಗಿದ್ದಾರೆ ರಸ್ತೆ ಕಾಂಕ್ರಿಟಿಕರಣಗೊಂಡು ತಿಂಗಳು ಆಗುವ ಮೊದಲೇ ಸಿಮೆಂಟ್ ಎದ್ದು ಹೋಗಿದೆ ಜಲ್ಲಿಗಳಲ್ಲಿ ಶಾಸಕರ ಮುಖ ಕಾಣುತ್ತಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಆರೋಪಿಸಿದ್ದಾರೆ.

ಅವರು ಇಂದು ಸುರತ್ಕಲ್ ಕೊಂಕಣ ರೈಲ್ವೆ ಸೇತುವೆ ಅಕ್ಕಪಕ್ಕದ ರಸ್ತೆ ದುರವಸ್ಥೆ ಖಂಡಿಸಿ ಮತ್ತು ಕೊಂಕಣ ರೈಲ್ವೆ ರೋರೋ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಡಿವೈಎಫ್ ಐ ಸುರತ್ಕಲ್ ಘಟಕ ಮತ್ತು ಸುರತ್ಕಲ್ ಗ್ರಾಮಾಂತರ ಆಟೋ ರಿಕ್ಷಾ ಚಾಲಕರ ಸಂಘ (ಸಿಐಟಿಯು) ನೇತೃತ್ವದಲ್ಲಿ ಚೊಕ್ಕಬೆಟ್ಟು ಕ್ರಾಸ್ ಬಳಿ ನಡೆದ ರಸ್ತೆ ತಡೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸುರತ್ಕಲ್ ಎಂ.ಆರ್.ಪಿ.ಎಲ್ ಮುಖ್ಯ ರಸ್ತೆ ಜನರ ಹೋರಾಟದ ಪ್ರತಿಫಲವಾಗಿ ನಿರ್ಮಾಣಗೊಂಡಿರುವುದು ಷಟ್ಪಥ ರಸ್ತೆ ಆಗಬೇಕಿದ್ದ ರಸ್ತೆ ಆಗಬೇಕಿದ್ದ ರಸ್ತೆಯನ್ನು ಚತುಷ್ಪಥಗೊಳಿಸಿರುವುದೇ ಶಾಸಕ ಭರತ್ ಶೆಟ್ಟಿ ಸಾಧನೆ, ರಸ್ತೆಗೆ ಶಿಲಾನ್ಯ ಮಾಡಿ ಹೋದ ಶಾಸಕರು ರಸ್ತೆ ಅಭಿವೃದ್ಧಿಯ ಗುಣಮಟ್ಟ ಪರಿಶೀಲನೆ ಯಾಕೆ ಮಾಡಿಲ್ಲ ಎಂದು ಟೀಕಿಸಿದ ಅವರು ರಸ್ತೆ ಅಭಿವೃದ್ಧಿಯನ್ನು ಅಪೂರ್ಣ ಗೊಳಿಸಿ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದರಿಂದ ನಿತ್ಯ ಇಲ್ಲಿ ಅಪಘಾತ ನಡೆಯುತ್ತಿದೆ, ವಾಹನ ಸಂಚಾರಕ್ಕೆ ತೊಂದರೆ ಆಗಿದೆ ಕೊಂಕಣ ರೈಲ್ವೆ ರೋರೋ ಘಟಕಕ್ಕೆ ಬರುವ ಬೃಹತ್ ಲಾರಿಗಳಿಂದ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.

ಡಿವೈಎಫ್ಐ ನಗರ ಉಪಾಧ್ಯಕ್ಷರಾದ ಶ್ರೀನಾಥ್ ಕುಲಾಲ್, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಅಬ್ದುಲ್ ಬಷೀರ್ ಮಾತನಾಡಿದರು.

ಡಿವೈಎಫ್ಐ ಮುಖಂಡರಾದ ಶೈಫರ್ ಆಲಿ, ಬಿ.ಕೆ ಮಸೂದ್,ಮುಸ್ತಫಾ ಬೈಕಂಪಾಡಿ,  ಸಾದಿಕ್ ಕಿಲ್ಪಾಡಿ,ಮುನಾಜ್, ರಿಹಾಬ್, ಅಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಲಕ್ಷ್ಮೀಶ್ ಕುಳಾಯಿ,ಸುಧೀರ್ ಕೋಡಿಕೆರೆ,ಸುನಿಲ್, ಗಣೇಶ್ ತೋಕೂರು, ಹಂಝ ಮೈಂದಗುರಿ, ಮೆಲ್ವಿನ್ ಪಿಂಟೋ, ನಾಗರಿಕ ಸಮಿತಿ ಮುಖಂಡರಾದ ಬಿ.ಎಂ ಅಬೂಸಾಲಿ ಕೃಷ್ಣಾಪುರ, ಫ್ರಾನ್ಸಿಸ್, ಮೆಹಬೂಬ್ ಖಾನ್, ಜಗದೀಶ್ ಕಾನ,ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಹನೀಫ್ ಇಡ್ಯ, ಸಲಾಂ ಕೊಲನಿ, ಶರೀಫ್ ಕಾನ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular