ಮಂಡ್ಯ: ಎಸ್ ಎಂ ಕೃಷ್ಣ ಪುತ್ರಿ ಶಾಂಭವಿಗೆ ಮಂಡ್ಯದಿಂದ ಟಿಕೆಟ್ ನೀಡಲಿ ಎಂದು ಮಂಡ್ಯ ಶಾಸಕ ರವಿಕುಮಾರ್ ಗೌಡ ಒತ್ತಾಯಿಸಿದ್ದಾರೆ.
ಮೊನ್ನೆಯಷ್ಟೆ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿಗೆ ಟಿಕೆಟ್ ನೀಡಬೇಕು ಎಂದಿದ್ದ ರವಿಕುಮಾರ್ ಗೌಡ ಇಂದು, ನಾವು ಎಂಪಿ ಚುನಾವಣೆ ಗೆಲ್ಲಬೇಕಿದೆ. ಎಸ್ ಎಂ ಕೃಷ್ಣ ಪುತ್ರಿ ಶಾಂಭವಿ, ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ ಅಥವಾ ಚಲುವರಾಯಸ್ವಾಮಿಯವರಿಗೆ ಟಿಕೆಟ್ ನೀಡಲಿ ಎಂದು ಮನವಿ ಮಾಡಿದರು.
ಇಷ್ಟು ಜನರಲ್ಲಿ ಯಾರಾದರೂ ನಿಂತರೆ ನಾವು ಗೆಲ್ಲಲು ಸಾಧ್ಯ. ಜಿಲ್ಲೆಯಲ್ಲಿ ಮೈತ್ರಿ ಇರುವ ಹಿನ್ನೆಲೆ ಈ ಮೂವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು. ಪೂರ್ವ ಭಾವಿ ಸಭೆಯಲ್ಲೂ ನನ್ನ ಈ ನಿರ್ಧಾರ ತಿಳಿಸಿದ್ದೇನೆ. ಅಥವಾ ನಟಿ ರಮ್ಯಾ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ರೆ ಅದಕ್ಕೆ ನನ್ನ ಆಹ್ವಾನ ಇದೆ ಎಂದಿದ್ದಾರೆ.