ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನಲ್ಲಿ ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿ ರೌಡಿಗಳ ಪರೇಡ್ ನಡೆಯಿತು. ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ನೇತೃತ್ವದಲ್ಲಿ ಪರೇಡ್ ನಡೆಯಿತು. ಮಂಗಳೂರು ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿಯ 14 ಪೊಲೀಸ್ ಠಾಣೆಗಳ 250 ರೌಡಿ ಗಳು ರೌಡಿ ಪರೇಡ್ ನಲ್ಲಿ ಭಾಗಿಯಾಗಿದ್ದರು. ಇನ್ನು ರೌಡಿ ಪರೇಡ್ ನಲ್ಲಿ ಹಲವು ರೌಡಿಗಳು ಹಾಜರಾಗಿಲ್ಲ. ಮುಂದಿನ ಬಾರಿ ಎಲ್ಲಾ ರೌಡಿಗಳನ್ನು ಪರೇಡ್ ಗೆ ಕರೆತರಲು ಸೂಚನೆ ನೀಡಲಾಯಿತು. ರೌಡಿ ಪರೇಡ್ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಮೀಷನರ್ ಅನುಪಮ್ ಅಗರ್ವಾಲ್, ಒಟ್ಟು 250 ರೌಡಿಗಳು ಪರೇಡ್ ನಲ್ಲಿ ಭಾಗವಹಿಸಿದ್ದರು. ಇವರೆಲ್ಲಾ ಕೊಲೆ,ಕೋಮುಗಲಭೆ,ನೈತಿಕ ಪೊಲೀಸ್ ಗಿರಿಯಲ್ಲಿ ಭಾಗವಹಿಸಿದವರಾಗಿದ್ದಾರೆ. ಎಲ್ಲಾ ರೌಡಿ ಗಳನ್ನು ವಿಚಾರಣೆ ಮಾಡಿದ್ದೇವೆ. ಮುಂದೆಯೂ ವಿಚಾರಣೆಯನ್ನು ಮಾಡುತ್ತೇವೆ. ಮುಂದೆ ಹಬ್ಬ,ಚುನಾವಣೆ ಬರುವ ಸಂಧರ್ಭದಲ್ಲಿ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಹಲವು ರೌಡಿಗಳನ್ನು ಗಡಿಪಾರು ಮಾಡುತ್ತೇವೆ. ಇಲ್ಲಿ ಹತ್ತು ರೌಡಿ ಗಳನ್ನು ಗಡಿಪಾರು ಮಾಡಲು ಸೂಚನೆ ನೀಡಿದ್ದೇನೆ ಎಂದರು.
