Saturday, April 19, 2025
Google search engine

Homeರಾಜ್ಯಕಾವೇರಿ ನೀರು ನಿಲ್ಲಿಸುವ ನಿರ್ಣಯ ಮಂಡಿಸದಿದ್ದರೆ ದಸರಾ ದಿನ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುವುದು: ಕುರುಬೂರು...

ಕಾವೇರಿ ನೀರು ನಿಲ್ಲಿಸುವ ನಿರ್ಣಯ ಮಂಡಿಸದಿದ್ದರೆ ದಸರಾ ದಿನ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುವುದು: ಕುರುಬೂರು ಶಾಂತಕುಮಾರ್

ಬೆಂಗಳೂರು: ಸರ್ಕಾರ ಕೂಡಲೇ ಅಧಿವೇಶನ ಕರೆದು ನೀರು ನಿಲ್ಲಿಸುವ ನಿರ್ಣಯ ಮಂಡಿಸದಿದ್ದರೆ, ದಸರಾ ಹಬ್ಬದ ದಿನ ಎಲ್ಲ ರಸ್ತೆಗಳ ಬಂದ್ ಚಳವಳಿ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ 12ನೇ ದಿನದ ಹೋರಾಟ ಉರುಳು ಸೇವೆ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರ ಜನರನ್ನ ದಿಕ್ಕು ತಪ್ಪಿಸುತ್ತಿದೆ ಹೋರಾಟವನ್ನು ಹಗುರವಾಗಿ ಕಾಣುತ್ತಿದೆ. ಮುಖ್ಯಮಂತ್ರಿಗಳಿಗೆ ನೀರು ನಿಲ್ಲಿಸುವ ಧೈರ್ಯ ಇಲ್ಲದಿದ್ದರೆ ವಿಧಾನ ಮಂಡಲ ಅಧಿವೇಶನ ಕರೆದು ನಿರ್ಣಯ ಮಂಡಿಸಿ ಕೇಂದ್ರಕ್ಕೆ ಎಚ್ಚರಿಸಲಿ ಎಂದು ಹೇಳಿದರು.

ಬೆಂಗಳೂರು ನಗರದ ಎಲ್ಲಾ ಶಾಸಕರ ಮನೆ ಮುಂದೆ 15ರಂದು ಸಂಘ ಸಂಸ್ಥೆಗಳು ಬಾಯಿ ಬಡಿದುಕೊಳ್ಳುವ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಬೇಕು ಎಂದು ಕರೆ ನೀಡಿದ್ದಾರೆ.

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ 12ನೇ ದಿನದ ಕಾವೇರಿ ನೀರಿನ ಅನ್ಯಾಯದ ಕುರಿತು ನಿರಂತರ ಧರಣಿಯನ್ನು  ಕುರುಬುರು ಶಾಂತಕುಮಾರ್ ನೇತೃತ್ವದಲ್ಲಿ  ಗುರುದೇವ್ ನಾರಾಯಣ ಕುಮಾರ್ ,ವೆಂಕಟಸ್ವಾಮಿ, ಕೆ ಕೆ ಮೋಹನ್, ರಾಜಪ್ಪ,  ಕಿರುಗಸೂರು ಶಂಕರ್  ಮುಖಂಡರುಗಳು ಫ್ರೀಡಂ ಪಾರ್ಕ್ ನಿಂದ ವಿಧಾನಸೌಧದವರೆಗೆ ಉರುಳುಸೇವೆ ಮಾಡಲು ಆರಂಭಮಾಡಿದರು.

ಪ್ರತಿಭಟನಕಾರರನ್ನು ಪೊಲೀಸರು ಉರುಳುಸೇವೆ ಮಾಡುವುದನ್ನು ತಡೆದರು ಆಗ ಇಬ್ಬರ ನಡುವೆ ವಾಗ್ವಾದ ನಡೆಯಿತು.

ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular