Monday, April 21, 2025
Google search engine

Homeಅಪರಾಧಮೈಸೂರು ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಹಣ್ಣುಗಳ ಸಗಟು ಮಾರುಕಟ್ಟೆಯಲ್ಲಿ ಹಣ್ಣುಗಳ ಕಳವು: ಸಿಸಿಟಿವಿ ಕ್ಯಾಮೆರಾದಲ್ಲಿ...

ಮೈಸೂರು ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಹಣ್ಣುಗಳ ಸಗಟು ಮಾರುಕಟ್ಟೆಯಲ್ಲಿ ಹಣ್ಣುಗಳ ಕಳವು: ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ

ಮೈಸೂರು: ಮೊದಮೊದಲು ಚಿನ್ನ, ಹಣ ಕದಿಯುತ್ತಿದ್ದ ಕಳ್ಳರು ಈಗೀಗ ಹಣ್ಣುಗಳು ಕದಿಯಲೂ ಶುರು ಮಾಡಿದ್ದಾರೆ. ಹೌದು,ಮೈಸೂರಿನಲ್ಲಿ ಎರಡು ಮೂರು ತಿಂಗಳಿಂದ ಹಣ್ಣುಗಳನ್ನು  ಕಳ್ಳರು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಾರೆ.

ಮೈಸೂರು ನಗರದ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಹಣ್ಣುಗಳ ಸಗಟು ಮಾರುಕಟ್ಟೆಯಲ್ಲಿ ಮಧ್ಯರಾತ್ರಿ ವ್ಯಕ್ತಿಯೊಬ್ಬ ಹಣ್ಣುಗಳು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಧ್ಯರಾತ್ರಿಯಲ್ಲಿ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಂದ ವ್ಯಕ್ತಿ,  ಪ್ಲಾಸ್ಟಿಕ್ ಟಾರ್ಪಲ್ ಹೊದಿಸಿ ಕಟ್ಟಿದ ಲಾರಿ ಯ ಮೇಲೆ ಹತ್ತಿ ಟಾರ್ಪಲ್ ಹರಿದು ಹಣ್ಣುಗಳನ್ನು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೈಸೂರಿನ ನ್ಯೂ ಸಯಾಜಿ ರಾವ್ ರಸ್ತೆಯಲ್ಲಿರುವ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಹಣ್ಣುಗಳ ಸಗಟು ಮಾರುಕಟ್ಟೆಯಲ್ಲಿ  ಹಣ್ಣುಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ.

ಪ್ರತಿದಿನ 100 ಕ್ಕೂ ಹೆಚ್ಚು ವಾಹನಗಳು ಕಾಶ್ಮೀರ ಸೇರಿದಂತೆ ಬೇರೆ ಕಡೆಯಿಂದ ಮಾರುಕಟ್ಟೆಗೆ ಪ್ರವೇಶ ಮಾಡುತ್ತವೆ. ಮಾರುಕಟ್ಟೆ ಯಲ್ಲಿ ಬೆಳ್ಳಿಗೆ 6 ರಿಂದ ಸಂಜೆ 5 ರವರೆಗೆ ವ್ಯಾಪಾರ ಮಾಡುತ್ತಿದ್ದರು. ಆದರೆ ಲಾರಿಗಳು ಮಾರುಕಟ್ಟೆ ಯಲ್ಲಿ ಹಣ್ಣುಗಳು ಮಾರುಕಟ್ಟೆ ತಂದ ಸಂದರ್ಭದಲ್ಲಿ ಮಧ್ಯಾರಾತ್ರಿ ಅಲ್ಲಿ ಕಳ್ಳತನ ವಾಗುತ್ತಿರುತ್ತೆ ಎಂದ ಮಳಿಗೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಮೈಸೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ನಡೆಯುವ ವ್ಯಾಪಾರಕ್ಕೆ ಮಳಿಗೆ ಮಾಲೀಕರು ಹಿಂದಿನ ದಿನ ಸಂಜೆಯೇ ಹಣ್ಣಿನ ಲಾರಿ ತರಿಸಿ ದಾಸ್ತನು ಮಾಡುವುದು ವಾಡಿಕೆಯಾಗಿದೆ. ಕೆಲವು ತಿಂಗಿಳಿನಿಂದಲೂ ಮಾರುಕಟ್ಟೆಯಲ್ಲಿ ಕಳ್ಳರ ಕಾಟ ಅಧಿಕವಾಗಿದೆ.

ಮಾರಾಟಕ್ಕೆ ತರಿಸುತ್ತಿದ್ದ ದಾಳಿಂಬೆ, ಸೇಬು, ಲಾರಿಗಳ ಮೇಲೆ ಕಳ್ಳರು ದಾಳಿ ಮಾಡುತ್ತಿದ್ದಾರೆ ಎಂದ ಲಾರಿ ಡ್ರೈವರ್ ಹಾಗೂ ಅಂಗಡಿ ಮಾಲೀಕರು ಅಲವತ್ತುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular