Sunday, April 20, 2025
Google search engine

Homeರಾಜ್ಯಎಕ್ಸ್ ನಲ್ಲಿ ಸುಳ್ಳು ಪೋಸ್ಟ್: ಬಿಜೆಪಿ ಮಹಿಳಾ ಕಾರ್ಯಕರ್ತೆ ಮೇಲೆ ಎಫ್ ಐಆರ್

ಎಕ್ಸ್ ನಲ್ಲಿ ಸುಳ್ಳು ಪೋಸ್ಟ್: ಬಿಜೆಪಿ ಮಹಿಳಾ ಕಾರ್ಯಕರ್ತೆ ಮೇಲೆ ಎಫ್ ಐಆರ್

ತುಮಕೂರು: ಸಾಮಾಜಿಕ ಜಾಲತಾಣಕ್ಕೆ ಎಕ್ಸ್ ನಲ್ಲಿ ಸುಳ್ಳು ಪೋಸ್ಟ್ ಹಿನ್ನೆಲೆ ಬಿಜೆಪಿ ಮಹಿಳಾ ಕಾರ್ಯಕರ್ತೆ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.

ಲುಲು ಶಾಪಿಂಗ್‌ ಮಾಲ್‌ ನಲ್ಲಿ ಭಾರತದ ಬಾವುಟಕ್ಕಿಂತ ಎತ್ತರದಲ್ಲಿ ಪಾಕಿಸ್ತಾನ ಬಾವುಟ ಹಾಕಲಾಗಿದೆ ಎಂದು ಬಿಜೆಪಿ ಮಹಿಳಾ ಕಾರ್ಯಕರ್ತೆ ಶಕುಂತಲಾ ನಟರಾಜ್  ಪೋಸ್ಟರ್ ಹಂಚಿಕೊಂಡಿದ್ದರು.

ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ದೇಶದ ಬಾವುಟ ಎತ್ತರದಲ್ಲಿ ಇರಬಾರದು.  ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್ ನವರಿಗೆ? ಡಿ.ಕೆ. ಶಿವಕುಮಾರ್‌ #ಬಾಯ್ಕಾಟ್ ಲುಲುಮಾಲ್‌’ ಎಂದು ಪೋಸ್ಟ್ ನ್ನು ಶಕುಂತಲಾ ಹಂಚಿಕೊಂಡಿದ್ದರು.

ಭಾರತದ ಬಾವುಟಕ್ಕೆ ಅವಮಾನ ಮಾಡುವ ರೀತಿಯಲ್ಲಿ ಪೋಸ್ಟ್‌ ಹಾಕಿದ್ದಾರೆ.  ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆ ಎಂದು  ಆರೋಪಿಸಿ ಶಕುಂತಲಾ ನಟರಾಜ್ ಮೇಲೆ ತುಮಕೂರಿನ ಜಯನಗರ ಠಾಣೆಯಲ್ಲಿ ಐಪಿಸಿ 153 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಶಕುಂತಲಾ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಶಕುಂತಲಾ ಅವರನ್ನ ಬಂಧಿಸಿದ್ದರು.

RELATED ARTICLES
- Advertisment -
Google search engine

Most Popular