Monday, April 21, 2025
Google search engine

Homeಸ್ಥಳೀಯಪ್ರವಾಸಿಗರಿಗೆ ಮೈಸೂರು ದಸರಾ ಪ್ಯಾಕೇಜ್ ಟೂರ್

ಪ್ರವಾಸಿಗರಿಗೆ ಮೈಸೂರು ದಸರಾ ಪ್ಯಾಕೇಜ್ ಟೂರ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್ ವ್ಯವಸ್ಥೆ ಕಲ್ಪಿಸಿದೆ. ಗಿರಿದರ್ಶಿನಿ, ದೇವದರ್ಶಿನಿ ಹಾಗೂ ಕೊಡಗು ಟ್ರಿಪ್ ಆಯೋಜನೆ ಮಾಡಿದೆ.

ಮೈಸೂರು ದಸರಾ ಮಹೋತ್ಸವದ ನಿಮಿತ್ತ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ಯಾಕೇಜ್ ಟೂರ್ ವ್ಯವಸ್ಥೆ ಒದಗಿಸಿದೆ.

ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ(ವೇಗದೂತ) ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಉತ್ಸವ ಸಾರಿಗೆ ಸೇವೆಗಳ ಜೊತೆಗೆ ವಿಶೇಷ ಪ್ಯಾಕೇಜ್ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಂಡಿದೆ. ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆ ವಾಹನಗಳಿಂದ ಒಂದು ದಿನದ ವಿಶೇಷ ಪ್ರವಾಸ ಸಾರಿಗೆಗಳ ಕಾರ್ಯಾಚರಣೆ ನಡೆಸಲಿದೆ.

ಗಿರಿದರ್ಶಿನಿ ಪ್ರವಾಸ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಕರಿಗೆ:-ರೂ.೪೦೦/- ಮತ್ತು ಮಕ್ಕಳಿಗೆ:- ರೂ.೨೫೦/-)ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್?, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. (ಪ್ರಯಾಣ ದರ ವಯಸ್ಕರಿಗೆ:- ರೂ.೪೫೦/- ಮತ್ತು ಮಕ್ಕಳಗೆ:- ರೂ.೨೫೦/-)ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ:- ರೂ.೩೦೦/- ಮತ್ತು ಮಕ್ಕಳಿಗೆ:- ರೂ.೧೭೫/-)

ಸಿಟಿ ವೋಲ್ವೋ ಸಾರಿಗೆಗಳ ಪ್ಯಾಕೇಜ್: ದೇವದರ್ಶಿನಿ : ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ,ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ: ರೂ.೫೦೦/- ಮತ್ತು ಮಕ್ಕಳಿಗೆ: ರೂ.೪೦೦/-)

ಮೈಸೂರು ನಗರ ದೀಪಾಲಂಕಾರ ದರ್ಶನ: ನಗರ ಬಸ್ ನಿಲ್ದಾಣದಿಂದ ಅರಮನೆ ರಸ್ತೆ, ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ರಸ್ತೆ, ಎಲ್.ಐ.ಸಿ ವೃತ್ತ, ಬಂಬೂ ಬಜಾರ್ ರಸ್ತೆ, ರೈಲ್ವೆ ನಿಲ್ದಾಣ ವೃತ್ತ ಜೆ.ಎಲ್.ಬಿ ರಸ್ತೆ(ಮೂಡ ಕಛೇರಿ ರಸ್ತೆ) ಮತ್ತು ನಗರ ಬಸ್ ನಿಲ್ದಾಣ. (ಪ್ರಯಾಣ ದರ ವಯಸ್ಕರಿಗೆ ರೂ.೨೦೦/- ಮತ್ತು ಮಕ್ಕಳಿಗೆ: ರೂ.೧೫೦/-) ನಗರ ವೋಲ್ವೋ ವಾಹನಗಳು-ಸಂಜೆ ೬.೦೦ಕ್ಕೆ ನಿರ್ಗಮನವಾಗಲಿದೆ.ಐರಾವತ ಕ್ಲಬ್ ಕ್ಲಾಸ್ ವಿಶೇಷ ಟ್ರಿಪ್: ಮಡಿಕೇರಿ ಪ್ಯಾಕೇಜ್ ನಿಸರ್ಗಧಾಮ:-ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ರಾಜಾ ಸೀಟ್ ಅಬ್ಬಿ ಫಾಲ್ಸ್ (ಪ್ರಯಾಣ ದರ ವಯಸ್ಕರಿಗೆ:(ರೂ.೧೨೦೦/- ಮತ್ತು ಮಕ್ಕಳಿಗೆ: ರೂ.೧೦೦೦/-)

ಈ ಎಲ್ಲ ಪ್ಯಾಕೇಜ್ ಬಸ್‌ಗಳು (ಮೈಸೂರು ನಗರ ದೀಪಾಲಂಕಾರ ದರ್ಶನ ಹೊರತುಪಡಿಸಿ) ಬೆಳಗ್ಗೆ ಮೈಸೂರಿನಿಂದ ಹೊರಟು ಮೇಲ್ಕಂಡ ವಿವಿಧ ಸ್ಥಳಗಳನ್ನು ಸಂದರ್ಶಿಸಿದ ನಂತರ ಸಾಯಂಕಾಲ ಮೈಸೂರಿಗೆ ವಾಪಸಾಗುತ್ತವೆ. ಅ. ೨೦ ರಿಂದ ೨೬ ರವರೆಗೆ ಪ್ಯಾಕೇಜ್ ಟ್ರಿಪ್ ವ್ಯವಸ್ಥೆ ಇರಲಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ಮೂಲಕ ತಿಳಿಸಿದೆ.
ರಾಜಹಂಸ ವಿಶೇಷ ಗಿರಿದರ್ಶಿನಿ: ಬಂಡೀಮರ, ಗೋಪಾಲಸ್ವಾಮಿ ಬೆಟ್ಟ, ಬಿಳಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಕರಿಗೆ: ರೂ.೬೨೫/- ಮತ್ತು ಮಕ್ಕಳಗೆ: ರೂ.೪೦೦/-)
ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ: ರೂ.೫೨೫/- ಮತ್ತು ಮಕ್ಕಳಗೆ: ರೂ.೩೫೦/-)

ಇ-ಟಿಕೇಟ್ ಬುಕಿಂಗ್‌ನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ, ಮೊಬೈಲ್ ಹಾಗೂ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಸಾರಿಗೆ ನಿಗಮ ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular