Saturday, April 19, 2025
Google search engine

Homeಬ್ರೇಕಿಂಗ್ ನ್ಯೂಸ್ದಸರಾ : ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ

ದಸರಾ : ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ

ಬೆಂಗಳೂರು: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭವಾಗಿದೆ. ಅ. ೨೧ರಿಂದ ೨೪ರ ವರೆಗೆ ಸಾಲು ಸಾಲು ರಜೆಗಳು ಸಿಗಲಿವೆ. ಹೀಗಾಗಿ ಬಹುತೇಕ ಮಂದಿ ಮೈಸೂರು ದಸರಾ ನೋಡಲು ಹೋಗಬೇಕು, ತಮ್ಮ ಊರುಗಳಿಗೆ ಹೋಗಲು, ಟ್ರಿಪ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಮತ್ತೊಂದೆಡೆ ದಸರಾ ನೆಪದಲ್ಲಿ ಖಾಸಗಿ ಬಸ್‌ಗಳು ಸುಲಿಗೆಗೆ ಇಳಿದಿವೆ ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗೆ ಹೋಗುವ ಬಸ್ ಗಳ ದರ ದುಪ್ಪಟ್ಟಾಗಿದೆ. ಎಸಿ, ವೋಲ್ವೋ, ಮಲ್ಟಿ ಆಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಅ.೨೧ರಿಂದ ರಜೆಗಳು ಆರಂಭವಾಗುವ ಹಿನ್ನೆಲೆ ಜನರು ಅ. ೨೦ರಂದು ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ ಮಾಡ್ತಿದ್ದಾರೆ. ಆದರೆ ಅ.೨೦ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ಕೊಟ್ಟಿದ್ದಾರೆ. ಬುಕ್ಕಿಂಗ್ ವೆಬ್ ಸೈಟ್‌ನಲ್ಲಿ ಟಿಕೆಟ್ ದರ ಒನ್ ಟು ಡಬಲ್ ಆಗಿದೆ.

ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಇರುವ ಟಿಕೆಟ್ ಬೆಲೆ ವಿವಿರ:
ಬೆಂಗಳೂರು-ಶಿವಮೊಗ್ಗ -೪೫೦-೬೫೦ , ೧೧೫೦-೧೪೦೦
ಬೆಂಗಳೂರು- ಹುಬ್ಬಳಿ -೬೦೦-೮೫೦ ದರ ೧೬೦೦-೨೦೦೦
ಬೆಂಗಳೂರು-ಮಂಗಳೂರು ೬೫೦-೦೦ ೨೦, ೧೬೦೦-೨೦೦೦
ಬೆಂಗಳೂರು ಉಡುಪಿ – ೭೦೦-೮೫೦ ೨೦, ೧೬೦೦-೧೯೦೦
ಬೆಂಗಳೂರು-ಧಾರವಾಡ -೬೫೦-೮೫೦ ೨೦, ೧೫೦೦-೨೧೦೦
ಬೆಂಗಳೂರು-ಬೆಳಗಾವಿ -೭೦೦-೯೦೦ ೨೦, ೧೫೦೦-೨೧೦೦
ಬೆಂಗಳೂರು ದಾವಣಗೆರೆ ೪೫೦-೬೫೦, ೧೩೦೦-೧೬೫೦
ಬೆಂಗಳೂರು ಚಿಕ್ಕಮಗಳೂರು ೬೦೦-೬೫೦, ೧೨೫೦-೧೫೦೦
ಬೆಂಗಳೂರು ಹಾಸನ -೬೫೦-೮೫೦, ೧೬೦೦-೧೮೫೦

ಹೊರರಾಜ್ಯಕ್ಕೆ:
ಬೆಂಗಳೂರು-ಚೆನೈ -೬೨೦-೮೫೦, ೧೮೦೦-೨೧೦೦
ಬೆಂಗಳೂರು- ಹೈದರಾಬಾದ್ -೧೩೦೦-೧೯೦೦, ೨೮೦೦-೩೩೦೦
ಬೆಂಗಳೂರು-ಕೊಯಮತ್ತೂರು- ೭೦೦-೧೧೦೦, ೨೩೦೦-೨೮೦೦
ಬೆಂಗಳೂರು – ಮುಂಬೈ- ೧೩೦೦-೧೬೦೦ ೨೩೦೦-೨೭೦೦
ಬೆಂಗಳೂರು-ಗೋವಾ-೧೦೦೦-೧೩೦೦, ೨೮೦೦-೩೧೦೦

RELATED ARTICLES
- Advertisment -
Google search engine

Most Popular