ಹನೂರು: ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಗೆ ಸರ್ಕಾರದಿಂದ ಅಮಾನ್ಯಗೊಂಡಿರುವ ನೋಟುಗಳನ್ನು ಹಾಕದಂತೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮನವಿ ಮಾಡಿಕೊಂಡಿದ್ದಾರೆ.
ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ವಾರ ನಡೆದ ಹುಂಡಿ ಎಣಿಕೆಯಲ್ಲಿ ಭಾರತ ಸರ್ಕಾರದಿಂದ ನಿಷೇಧ ಮಾಡಲಾಗಿರುವ ೨೦೦೦ ಮುಖಬೆಲೆಯ ೧೭೮ ನೋಟುಗಳು ೩.೫೬ ಲಕ್ಷದಷ್ಟು ಸಂಗ್ರಹವಾಗಿದೆ . ಅಕ್ಟೋಬರ್ ೭ ರವರೆಗೆ ಬದಲಾವಣೆಗೆ ಅವಕಾಶವಿದ್ದರಿಂದ ಪ್ರಾಧಿಕಾರದ ಕಾರ್ಯದರ್ಶಿ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಇದೊಂದು ಬಾರಿ ಮಾತ್ರ ಬದಲಾವಣೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಎನ್ನಲಾಗಿದೆ. ಉಳಿದಂತೆ ಕಳೆದ ನಾಲ್ಕು ವರ್ಷಗಳ ಹಿಂದೆ ಅಮಾನ್ಯಗೊಂಡಿರುವ ೧ಸಾವಿರ,೫೦೦ರೂ ನೋಟುಗಳನ್ನು ಸಹ ಭಕ್ತರು ಹುಂಡಿಗೆ ಹಾಕುತ್ತಿದ್ದಾರೆ. ಹುಂಡಿಯಲ್ಲಿ ಹಾಕಲಾಗಿದ್ದ ೨೮,೫೩,೫೦೦ ಮೌಲ್ಯದ ನೋಟುಗಳು ಅಮಾನ್ಯಗೊಂಡಿರುವುದರಿಂದ ಯಾವುದಕ್ಕೂ ಪ್ರಯೋಜನ ಬಾರದಂತಾಗಿದೆ. ಆದ್ದರಿಂದ ಭಕ್ತಾದಿಗಳು ಅಮಾನ್ಯಗೊಂಡಿರುವ ನೋಟುಗಳನ್ನು ಹುಂಡಿಗೆ ಹಾಕದಂತೆ ಮನವಿ ಮಾಡಿದ್ದಾರೆ.
