Monday, April 21, 2025
Google search engine

Homeರಾಜ್ಯಮೈಸೂರು: ರೈತ ದಸರಾ ಕಾರ್ಯಕ್ರಮಗಳ ಆಯೋಜನೆ ಕುರಿತು ಪೂರ್ವಭಾವಿ ಸಭೆ

ಮೈಸೂರು: ರೈತ ದಸರಾ ಕಾರ್ಯಕ್ರಮಗಳ ಆಯೋಜನೆ ಕುರಿತು ಪೂರ್ವಭಾವಿ ಸಭೆ

ಮೈಸೂರು: ರೈತ ದಸರಾ ಉಪಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಇಂದು ಜಿಲ್ಲಾ ಪಂಚಾಯತಿಯ ದೇವರಾಜ್ ಅರಸು ಸಭಾಂಗಣದಲ್ಲಿ ರೈತ ದಸರಾ ಕಾರ್ಯಕ್ರಮಗಳ ಆಯೋಜನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ರೈತ ದಸರಾ ಸಮಿತಿಯ ಉಪ ವಿಶೇಷಾಧಿಕಾರಿಗಳು ಆಗಿರುವ ಜಿ.ಪಂ ಉಪಕಾರ್ಯರ್ಶಿ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಅವರು ಮಾತನಾಡಿ, ಪ್ರಸ್ತುತ ನೇಮಕಗೊಂಡಿರುವ ಸರ್ಕಾರೇತರ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳಿಗೆ ಇದುವರೆಗೂ ರೈತ ದಸರಾ ಕಾರ್ಯಕ್ರಮಕ್ಕಾಗಿ ನಡೆಸಿರುವ ತಯಾರಿ ಹಾಗೂ ಆಯೋಜಿಸಿರುವ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟರು.

ಇದೇ ವೇಳೆ ರೈತ ದಸರಾ ಕಾರ್ಯಕ್ರಮಗಳು, ಮಳಿಗೆಗಳ ಬಗ್ಗೆ, ಸ್ಪರ್ಧೆಗಳ ಸಿದ್ದತೆ ಕುರಿತು ಅಧಕಾರಿಗಳೊಂದಿಗೆ ಚರ್ಚಿಸಿದರು.

ರೈತ ದಸರಾವನ್ನು ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರವು ಅಗತ್ಯವಾಗಿದೆ ಹಾಗೂ ಸರ್ಕಾರೇತರ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ‌ ಸಹಕಾರವನ್ನು ರೈತ ದಸರಾ ಆಯೋಜನೆಗೆ ಅಗತ್ಯವಾಗಿದೆ ಎಂದು ಕೋರಿದರು.

ಸಭೆಯಲ್ಲಿ ರೈತ ದಸರಾ ಸಮಿತಿ ಕಾರ್ಯಾಧ್ಯಕ್ಷರೂ ಆಗಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್,  ರೈತ ದಸರಾ ಉಪಸಮಿತಿ ಸದಸ್ಯ ಕಾರ್ಯದರ್ಶಿಯೂ ಆಗಿರುವ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ನಾಗರಾಜು ಸೇರಿದಂತೆ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular