Saturday, April 19, 2025
Google search engine

Homeಸ್ಥಳೀಯನಂಜುಡೇಶ್ವರನಿಗೆ ತುಲಾಭಾರ ಸೇವೆ: ಹೆಚ್.ಡಿ ಕುಮಾರಸ್ವಾಮಿ

ನಂಜುಡೇಶ್ವರನಿಗೆ ತುಲಾಭಾರ ಸೇವೆ: ಹೆಚ್.ಡಿ ಕುಮಾರಸ್ವಾಮಿ

ನಂಜನಗೂಡು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ದಂಪತಿ ಕಳೆದ ಒಂದು ವಾರ ಅಷ್ಟೇ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಭೇಟಿ ನೀಡಿದ್ದು, ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆ ನೆರವೇರಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ದಂಪತಿ ಇಂದು ಅ.೧೬ ನಂಜನಗೂಡಿಗೆ ಭೇಟಿ ನೀಡಿ ನಂಜುಡೇಶ್ವರನಿಗೆ ತುಲಾಭಾರಕ್ಕೆ ಪೂಜೆ ನೆರವೇರಿಸಿದ್ದಾರೆ. ಮೊದಲಿಗೆ ಹೆಚ್.ಡಿ ಕುಮಾರಸ್ವಾಮಿ ಅವತು ತಮ್ಮ ಕುಟುಂಬ ಸಮೇತವಾಗಿ ತುಲಾಭಾರಕ್ಕೆ ವಿಶೇಷ ಪೂಜೆ ಮಾಡಿದರು. ಬಳಿಕ ಅನಿತಾ ಕುಮಾರಸ್ವಾಮಿ ಅವರು ಬೆಲ್ಲದ ತುಲಾಭಾರ ಮಾಡಿಸಿದರು. ಪತ್ನಿ ನಂತರ ಕುಮಾರಸ್ವಾಮಿ ಅವರೂ ಸಹ ತುಲಾಭಾರ ಸೇವೆ ಸಲ್ಲಿಸಿದರು.

ನಂಜುಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ನನ್ನ ಆರೋಗ್ಯ ಸಮಸ್ಯೆಯಿಂದ ಭಗವಂತ ಪಾರು ಮಾಡಿದ್ದಾನೆ. ನಾನು ಅನಾರೋಗ್ಯ ಸಮಸ್ಯೆಗೆ ಒಳಗಾದಾಗ ನನ್ನ ಕುಟುಂಬ ಸದಸ್ಯರೊಬ್ಬರು ನರಸಿಂಹಸ್ವಾಮಿ ನಂಜುಂಡೇಶ್ವರನಿಗೆ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಇಂದು ನಂಜುಂಡೇಶ್ವರನಿಗೆ ತುಲಾಭಾರ ಮಾಡಿಸಿದ್ದೇವೆ. ನಾಡಿಗೆ ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular