ಕೆ.ಆರ್.ನಗರ: ತಾಲೂಕಿನ ತಿಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶಾಸಕ ಡಿ.ರವಿಶಂಕರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.ಸಿದ್ದೇಗೌಡ ಮತ್ತು ನಿರ್ದೇಶಕರು ಶಾಸಕರನ್ನು ಸಂಘದ ವತಿಯಿಂದ ಸನ್ಮಾನಿಸಿ, ಸಂಘದ ಕಟ್ಟಡ ದುರಸ್ಥಿಗಾಗಿ ಹಾಗೂ ಗೋದಾಮು ನಿರ್ಮಾಣ ಮಾಡಲು ೫೦ ಲಕ್ಷ ಅನುದಾನ ಕೊಡಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಧ್ಯಕ್ಷ ಎಸ್.ಸಿದ್ದೇಗೌಡ ಮಾತನಾಡಿ ಸಂಘ ೬೦ ವರ್ಷ ಹಳೆಯದಾಗಿದ್ದು ಮೂರು ಗೋದಾಮುಗಳ ದುರಸ್ಥಿಗಾಗಿ ಅನುದಾನ ಕೊಡಿಸಬೇಕು ಎಂದು ಮನವಿ ಮಾಡಿದ ಅಧ್ಯಕ್ಷರು ಖಾಸಗಿಯವರಿಂದ ಜಮೀನು ಖರೀದಿ ಮಾಡಿ ಸಂಘದ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಈಗ ಅವಶ್ಯಕವಿರುವ ಈ-ಸ್ವತ್ತು ಸೇರಿದಂತೆ ಇದರ ದಾಖಲಾತಿಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಕೊಡಿಸಬೇಕು ಎಂದು ಕೋರಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ೫ ಲಕ್ಷದ ವರೆಗೆ ರೈತ ಸದಸ್ಯರಿಗೆ ಸಾಲ ನೀಡುವ ಯೋಜನೆ ಜಾರಿಗೆ ತಂದಿದ್ದು ಸಂಘದ ಆಡಳಿತ ಮಂಡಳಿ ರೈತರಿಗೆ ಸಾಲ ಸೌಲಭ್ಯ ನೀಡುವುದರ ಜತೆಗೆ ಸಂಘಕ್ಕೆ ಹೆಚ್ಚು ಮಂದಿ ರೈತರನ್ನು ಸದಸ್ಯರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದಲ್ಲದೆ ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ದಾಖಲಾತಿ ನೀಡುವಂತೆ ಸೂಚಿಸಿದರು.
ಸಂಘದ ನಿರ್ದೇಶಕರಾದ ವಿಷಕಂಠೇಗೌಡ, ಡಿ.ಕೆ.ಕರೀಗೌಡ, ಕೆ.ಮಹದೇವ್, ತಿಮ್ಮಪ್ಪ, ಗೌರಮ್ಮ, ಕೆ.ಆರ್.ರಮೇಶ್, ಭೀಮಪ್ಪ, ವಿಶ್ವನಾಥ್, ಕೃಷ್ಣಮೂರ್ತಿ, ಮಣಿಯಮ್ಮ, ನಿಂಗಾಜಮ್ಮ ಸಂಘದ ಸಿಇಒ ಮಹದೇವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಕೆ.ಆರ್.ನಗರ ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಕಾಂಗ್ರೆಸ್ ಮುಖಂಡರಾದ ಮಂಜುನಾಥ್, ಮಹದೇವನಾಯಕ, ಗಂಗಾಧರ್, ಅರುಣ್, ತಿಪ್ಪೂರುರವಿ ಮತ್ತಿತರರು ಹಾಜರಿದ್ದರು.