ಮೈಸೂರು : ಭಾರತ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿಯಿಂದ ಮಾನ್ಯತೆ ಪಡೆದಿರುವ ಶೋಭಿತ ನಂಜೇಗೌಡ ಫಾರಂನಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆಸಿದ ತೆಂಗಿನ ಸಸಿಗಳು 53 ರೂ, ಸಬ್ಸಿಡಿಯಲ್ಲಿ ಲಭ್ಯವಿದೆ ಎಂದು ಫಾರಂ ಮಾಲಿಕರಾದ ಕೆ.ಎನ್.ಚಂದ್ರಶೇಖರ ತಿಳಿಸಿದ್ದಾರೆ.
ಈ ಕುರಿತು ಅವರು, ಪ್ರಸಕ್ತ ಹಂಗಾಮಿನಲ್ಲಿ 40 ಸಾವಿರ ಸಸಿಗಳನ್ನು ರೈತರಿಗೆ ನೀಡಲು ತಮ್ಮ ಫಾರಂನಲ್ಲಿ ಬೆಳೆಸಲಾಗಿದೆ. ತೆಂಗು ಅಭಿವೃದ್ಧಿ ಮಂಡಳಿಯಿಂದ ಪ್ರತಿಯೊಂದು ಸಸಿಗೂ ತಲಾ 53 ರೂ. ಸಬ್ಸಿಡಿ ನೀಡಲಾಗುತ್ತದೆ. ಜತೆಗೆ ರಾಜ್ಯ ಸರ್ಕಾರದ ಉದ್ಯೋಗ ಖಾತರಿ ಯೋಜನೆಯಲ್ಲಿ ತೆಂಗು ನಾಟಿ ಮಾಡಿದ್ದಲ್ಲಿ ಪ್ರತಿ ಹೆಕ್ಟೇರ್ಗೆ 60 ಸಾವಿರ ರೂ. ಸಹಾಯ ಧನ ಸಿಗುತ್ತದೆ ಎಂದು ವಿವರಣೆ ನೀಡಿದ್ದಾರೆ.
ರೈತರು ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಜಮೀನಿನ ಆರ್ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ನ ಝೆರಾಕ್ಸ್ ಪ್ರತಿಗಳನ್ನು ಖರೀದಿಯ ರಸೀದಿಯೊಂದಿಗೆ ನೀಡಿದರೆ ರೈತರ ಬ್ಯಾಂಕ್ ಖಾತೆಗೆ ಸಹಾಯಧನ ಜಮೆಯಾಗುತ್ತದೆ. 40 ಸಾವಿರ ಸಸಿಗಳನ್ನೂ ಸಹ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಸಲಾಗಿದ್ದು, ತಿಪಟೂರ್ ಟಾಲ್, ಹೈಬ್ರೀಡ್, ಸಿಓಡಿ, ಎಂಡಿ, ಸಿಜೆಡಿ ಜಾತಿಯ ಸಸಿಗಳು ಲಭ್ಯವಿದೆ. ಮೊದಲು ಬಂದವರಿಗೆ ಆದ್ಯತೆ ಅನುಸಾರ ಸಸಿಗಳ ವಿತರಣೆ ಮಾಡಲಾಗುವುದು. ಆಸಕ್ತರು, ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9886468237, 8123777608 ಸಂಪರ್ಕಿಸಬಹುದು ಅಥವಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಲ್ಲಿರುವ ತೆಂಗಿನ ಸಸಿ ಫಾರಂಗೆ ಭೇಟಿ ನೀಡಿ ಪರಿಶೀಲಿಸಬಹುದು ಎಂದು ಅವರು ತಿಳಿಸಿದ್ದಾರೆ.