Sunday, April 20, 2025
Google search engine

Homeಸ್ಥಳೀಯದಸರಾ ಚಲನಚಿತ್ರೋತ್ಸವ ಅಂಗವಾಗಿ ಸಭೆ

ದಸರಾ ಚಲನಚಿತ್ರೋತ್ಸವ ಅಂಗವಾಗಿ ಸಭೆ

ಮೈಸೂರು: ದಸರಾ ಅಂಗವಾಗಿ ಚಲನಚಿತ್ರೋತ್ಸವ 2023 ಸಂಬಂಧ ಸರ್ಕಾರದಿಂದ ನೇಮಕವಾಗಿರುವ ಅಧಿಕಾರೇತರ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಪ್ರವಾಸೋದ್ಯಮ ಇಲಾಖೆಯ ಮಯೂರ ಹೊಟೇಲ್ ನಲ್ಲಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಲನ ಚಿತ್ರೋತ್ಸವ ಉಪ ಸಮಿತಿಯ ವಿಶೇಷಧಿಕಾರಿಗಳಾದ ಎಂ.ಕೆ. ಸವಿತಾ ಅವರು ಮಾತನಾಡಿ ಚಲನಚಿತ್ರೋತ್ಸವ ಉಪಸ್ಥಿತಿಯಿಂದ ಆಯೋಜಿಸಿರುವ ಕಾರ್ಯಕ್ರಮಗಳ ವಿವರವನ್ನು ನೀಡಿದರು.

ಚಲನಚಿತ್ರೋತ್ಸವ ಸಂಬಂಧ ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿತ್ತು. ಸಾಮಾಜಿಕ ಸಂದೇಶ ಬೀರುವ ಚಲನಚಿತ್ರಗಳನ್ನು ಅಕ್ಟೋಬರ್ 16ರಿಂದ 22 ವರೆಗೆ ಮಾಲ್ ಆಫ್ ಮೈಸೂರಿನ ಐನಾಕ್ಸ್ ನಲ್ಲಿ ಮೂರು ಪರದೆ ಹಾಗೂ ಹೆಬಿಟ್ಯಾಟ್ ಮಾಲ್ ನ ಡಿಆರ್ ಸಿ ಯಲ್ಲಿ ಒಂದು ಪರದೆಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

ಸಿನಿಮಾಗಳನ್ನು ಉತ್ತೇಜಿಸುವ ಸಲುವಾಗಿ ಹೆಚ್ಚು ಜನರು ಸಿನಿಮಾಗಳಿಗೆ ಬರುವಂತೆ ಹಾಗೂ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗಳಿಗೆ ಜನರನ್ನು ಕರೆತರಲು ಸಭೆಯಲ್ಲಿ ಮನವಿ ಮಾಡಲಾಯಿತು.

ಸಭೆಯಲ್ಲಿ ಚಲನಚಿತ್ರ ಉಪ ಸಮಿತಿಯ ಅಧ್ಯಕ್ಷರಾದ ರಮೇಶ್, ಚಲನಚಿತ್ರೋತ್ಸವ ಉಪಸಮಿತಿಯ ವಿಶೇಧಿಕಾರಿಯಾದ ಎಂ.ಕೆ. ಸವಿತಾ, ಸಮಿತಿಯ ಕಾರ್ಯಾಧ್ಯಕ್ಷರಾದ ವಿ. ಪ್ರಿಯದರ್ಶಿನಿ, ಸದಸ್ಯ ಕಾರ್ಯದರ್ಶಿಯಾದ ಅಶೋಕ್ ಕುಮಾರ್ .ಡಿ ಹಾಗೂ ಚಲನ ಚಿತ್ರೋತ್ಸವ ಉಪ ಸಮಿತಿಯ ಸದಸ್ಯರಗಳು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular