ಮೈಸೂರು: ಅಕ್ಟೋಬರ್ 18ರಿಂದ 21ರವರೆಗೆ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆಯುವ ಯುವ ದಸರಾ ಪೂರ್ವ ಭಾವಿ ಸಿದ್ಧತೆಯ ಬಗ್ಗೆ ಇಂದು ಸರ್ಕಾರದ ಅತಿಧಿ ಗೃಹದಲ್ಲಿ ಅಧಿಕಾರೇತರ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಯುವ ದಸರಾ ಉಪಸಮಿತಿಯಿಂದ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಸಮಿತಿಯ ಅಧ್ಯಕ್ಷರಿಗೆ, ಉಪಾಧ್ಯಕ್ಷರಗಳಿಗೆ ಹಾಗೂ ಸದಸ್ಯರಿಗೆ ಯುವ ದಸರಾ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಅಗತ್ಯ ಸಹಕಾರ ನೀಡುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಅಧಿಕಾರೇತರ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಸೂಕ್ತವಾದ ಆಸನ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಮಿತಿ ಅಗತ್ಯ ಸಹಕಾರ ನೀಡುವುದಾಗಿ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಯುವ ದಸರಾ ಉಪಸಮಿತಿಯ ಸಮನ್ವಯಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ, ಸಮಿತಿಯ ಕಾರ್ಯಾಧ್ಯಕ್ಷ ರಾದ ಉಪ ವಿಭಾಗಾಧಿಕಾರಿ ರಕ್ಷಿತ್, ಸದಸ್ಯ ಕಾರ್ಯದರ್ಶಿ ಶುಭಾ, ಸಹಾ ಕಾರ್ಯದರ್ಶಿ ಚೆನ್ನಪ್ಪ, ದಸರಾಉಪ ಸಮಿತಿಯ ಅಧ್ಯಕ್ಷರಾದ ಆರ್.ಚೆಲುವರಾಜು, ಉಪಾಧ್ಯಕ್ಷರುಗಳಾದ ಹಿನಕಲ್ ನಂಜುಂಡ, ರಂಜಿತ್ ಹಾಗೂ ಕೆ.ಬಿ.ಸ್ವಾಮಿ ಮತ್ತು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.