Saturday, April 19, 2025
Google search engine

Homeಸ್ಥಳೀಯಯುವ ದಸರಾ ಉಪ ಸಮಿತಿಯಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ಪರಿಶೀಲನೆ

ಯುವ ದಸರಾ ಉಪ ಸಮಿತಿಯಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ಪರಿಶೀಲನೆ

ಮೈಸೂರು: ಅಕ್ಟೋಬರ್ 18 ರಿಂದ 21ರ ವರೆಗೆ ಮಹಾರಾಜ ಕಾಲೇಜಿನ ಮೈದಾನ ನಡೆಯುವ ದಸರಾ ಸಿದ್ಧತೆಯ ಬಗ್ಗೆ ಇಂದು ಯುವ ದಸರಾ ಉಪ ಸಮಿತಿಯಿಂದ ಸ್ಥಳ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ದೇಶ ನಿರ್ದೇಶಕರು ಹಾಗೂ ಯುವದಸರ ಉಪಸಮಿತಿಯ ಸಮನ್ವಯಧಿಕಾರಿ ಎಂ ಕೆ ಸವಿತಾ ಅವರು ಅವರು ಸ್ಧಳಕ್ಕೆ ಭೇಟಿ ನೀಡಿ ಅಗತ್ಯವಾದ ಆಸನ ವ್ಯವಸ್ಥೆ, ಮೊಬೈಲ್ ಶೌಚಾಲಯ ಕುಡಿಯುವ ನೀರು ಹಾಗೂ ಸಮರ್ಪಕವಾದ ವೇದಿಕೆಯ ಅಂತಿಮ ಸಿದ್ಧತೆಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.

ವ್ಯವಸ್ಥೆ ಮಾಡಿಕೊಳ್ಳುವಂತೆ ಹಾಗೂ ಕಾರ್ಯಕ್ರಮಕ್ಕೆ ಬೇಕಾದಂತಹ ಅಗತ್ಯ ಸರ್ಕಾರವನ್ನು ನೀಡುವ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಉಪ ವಿಭಾಗಾಧಿಕಾರಿ ರಕ್ಷಿತ್, ಯುವ ದಸರಾ ಸಮಿತಿಯ ಅಧ್ಯಕ್ಷರಾದ ಚೆಲುವರಾಜು, ಉಪಾಧ್ಯಕ್ಷರಾದ ಕೆ ವಿ ಸ್ವಾಮಿ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular