ತುಮಕೂರು: ಕೈ ಕೊಟ್ಟ ಮಳೆಯಿಂದಾಗಿ ಶೇಂಗಾ ಬೆಳೆ ಒಣಗುತ್ತಿದ್ದು, ಇದರಿಂದ ನೊಂದ ರೈತ ಶೇಂಗಾ ಬೆಳೆಯನ್ನ ಮೇಯಲು ಹಸುಗಳನ್ನು ಬಿಟ್ಟಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಪುಲಮಾಚಿಯಲ್ಲಿ ನಡೆದಿದೆ.
ರೈತ ಎಳ್ ನಾಗಪ್ಪ 1 ಎಕರೆ ಜಾಮೀನಿನಲ್ಲಿ ಮೂರು ತಿಂಗಳ 60 ಸಾವಿರ ರೂಪಾಯಿ ಖರ್ಚು ಮಾಡಿ ರೈತ ಶೇಂಗಾ ಬಿತ್ತನೆ ಮಾಡಿದ್ದ. ಉತ್ತಮ ಮಳೆಯಾಗಿದ್ರೆ, ಇಷ್ಟು ಹೊತ್ತಿಗೆ ಶೇಂಗಾ ಬೆಳೆ ರೈತರಿಗೆ ಸಿಗುತ್ತಿತ್ತು. ಆದರೆ ಮಳೆಯಿಲ್ಲದ ಪರಿಣಾಮ ಶೇಂಗಾ ಬೆಳೆ ಒಣಗುತ್ತಿದೆ.
ಬೆಳೆ ಉಳಿಸಿಕೊಳ್ಳಲಾಗದೆ ಹಸುಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.