ಮೈಸೂರು: ವಿಶ್ವ ವಿಖ್ಯಾತ ದಸರಾದಲ್ಲಿ ಕರ್ಕಶವಾಗಿ ಸದ್ದು ಮಾಡುವ ಶಬ್ದ ಮಾಲಿನ್ಯ ಸಾಮಗ್ರಿಗಳನ್ನು ಮಾರುಕಟ್ಟೆಯಲ್ಲಿ, ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದು, ಈ ಸಾಮಾಗ್ರಿಗಳ ಮಾರಾಟವನ್ನು ನಿಷೇಧಿಸುವಂತೆ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ರವರಿಗೆ ಪರಿಸರ ಸಂಜೀವಿನಿ ತಂಡವು ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಶಬ್ದ ಮಾಲಿನ್ಯ ಸಾಮಾಗ್ರಿಗಳಿಂದ ಸಾರ್ವಜನಿಕರಿಗೆ ಹಾಗೂ ಮಹಿಳಾ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಮಾಲಿನ್ಯಗಳನ್ನು ಉಂಟುಮಾಡುತ್ತಿರುವ ಸಾಮಗ್ರಿಗಳ ಮಾರಾಟವನ್ನು ನಿಷೇಧಿಸಿಸದಲ್ಲಿ ಪ್ರವಾಸಿಗರಿಗೆ ಹಾಗೂ ಪರಿಸರಕ್ಕೆ ಹೆಚ್ಚಿನ ಅನುಕೂಲವಾಗುವುದರ ಜೊತೆಗೆ ದಸರಾ ಹಬ್ಬಕ್ಕೆ ಹೆಚ್ಚಿನ ಮೆರಗು ಹಾಗೂ ಮೈಸೂರಿಗೆ ಗೌರವ ತಂದು ಕೊಡುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪರಿಸರ ಸಂಜೀವಿನಿ ತಂಡದ ಅಧ್ಯಕ್ಷರಾದ ಸಿ ಸಂದೀಪ್ ಹಾಗೂ ಸದಸ್ಯರಾದ ದೀಪಕ್, ಶ್ರೀಧರ್, ಮಧುಸೂದನ್, ಧರ್ಮೇಂದರ್, ಸುರೇಂದ್ರ ಹಾಗೂ ಮುಂತಾದವರು ಹಾಜರಿದ್ದರು.