ಮಂಡ್ಯ: ರಾಜಕೀಯ ಬಿಟ್ಟು ಕೃಷಿ ಕೈಹಿಡಿದ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ, ಎಸಿ ಕಾರು ಬಿಟ್ಟು ಬಿಸಿಲಿನಲ್ಲಿ ಟ್ರ್ಯಾಕ್ಟರ್ ಏರಿ ಉಳುಮೆ ಮಾಡುತ್ತಿದ್ದಾರೆ.
ತಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಏರಿ ಉಳುಮೆ ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.
ಜಮೀನಿನಲ್ಲಿ ಉಳುಮೆ ಮಾಡಿದ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಹಚಿಕೊಂಡಿದ್ದಾರೆ.

ಕೃಷಿ ನನ್ನ ಇಷ್ಟದ ಕಾಯಕವಾಗಿದೆ. ಕೃಷಿ ಕುಟುಂಬದಿಂದ ಬಂದಿರುವ ನನಗೆ ಬಾಲ್ಯದಿಂದಲೂ ಕೃಷಿ ಮೇಲೆ ಹೆಚ್ಚಿನ ಒಲವು ಇತ್ತು. ಇತ್ತೀಚೆಗೆ ಬಿಡುವಿಲ್ಲದ ರಾಜಕೀಯ ಒತ್ತಡಗಳ ನಡುವೆ ಸಂಪೂರ್ಣವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಾಗಿರಲಿಲ್ಲ. ಬಿಡುವಾದಾಗಲೆಲ್ಲಾ ನಮ್ಮ ತೋಟದಲ್ಲಿ ಕಾರ್ಯನಿರತನಾಗುತ್ತೇನೆ. ಭೂ ತಾಯಿಯ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಸುರೇಶ್ ಗೌಡ ಬರೆದುಕೊಂಡಿದ್ದಾರೆ.