ಚಿತ್ರದುರ್ಗ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಚಿತ್ರದುರ್ಗ ನಗರದ ವಿವಿಧ ಹೋಟೆಲ್‌ಗಳು ಮತ್ತು ಬೇಕರಿಗಳಿಗೆ ಭೇಟಿ ನೀಡಿ ಶುಚಿತ್ವ ಮಾಪನ (ಹೈಜೀನ್ ರೇಟಿಂಗ್ ಆಡಿಟ್) ನಡೆಸಿತು. ಬೆಂಗಳೂರಿನಿಂದ ಆಗಮಿಸಿದ ಅಪರ್ಣಾ ಭಟ್ ಫೋಸ್ಟಾಕ್ ಮತ್ತು ಎಫ್ ಎಸ್ ಎಸ್ ಎಐ ಪರವಾನಗಿ ಹೊಂದಿರುವ ಕೆಲವು ಆಯ್ದ ಹೋಟೆಲ್ ಗಳು ಮತ್ತು ಬೇಕರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಾಂಖ್ಯಿಕ ಅಧಿಕಾರಿ ಡಾ.ಸಿ.ಎಲ್.ಪಾಲಾಕ್ಷ, ಆಹಾರ ಭದ್ರತಾ ಅಧಿಕಾರಿಗಳಾದ ತಿರುಮಲೇಶ್, ನಂದಿನಿ ಕಡಿ, ಮಂಜುನಾಥ್ ಇದ್ದರು.