Monday, April 21, 2025
Google search engine

Homeಅಪರಾಧಮೈಸೂರು: ಒಂದೂವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಕೊಂದ ತಂದೆ

ಮೈಸೂರು: ಒಂದೂವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಕೊಂದ ತಂದೆ

ಮೈಸೂರು: ಒಂದೂವರೆ ವರ್ಷದ ಮಗುವನ್ನು ಕೆರೆಗೆ ಎಸೆದು ತಂದೆಯೇ  ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿನಲ್ಲಿ ನಡೆದಿದೆ.

2014 ರಲ್ಲಿ ಗಣೇಶ್ (30) ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ನಾರಾಯಣ ಸ್ವಾಮಿ ಎಂಬುವವರ ಮಗಳು ಲಕ್ಷ್ಮೀ ಎಂಬುವವರನ್ನು ಮದುವೆಯಾಗಿದ್ದರು. ದೇವನಹಳ್ಳಿಯಲ್ಲಿಯೆ ವಾಸವಿದ್ದ ದಂಪತಿಗೆ ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಂದು ವರ್ಷದ ಹಿಂದೆ ಮೂರನೇ ಮಗುವಿಗೆ ಜನ್ಮ ನೀಡುವ ವೇಳೆ ಲಕ್ಷ್ಮೀ ಮೃತಪಟ್ಟಿದ್ದಾಳೆ.

ಹೀಗಾಗಿ ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಒಂದೂವರೆ ವರ್ಷದ ಕುಮಾರ್ ಎಂಬ ಗಂಡು ಮಗುವಿನಿಂದಿಗೆ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿಗೆ ವಾಪಸ್ ಆಗಿದ್ದಾನೆ. ಇಲ್ಲಿ ತನ್ನ ತಾಯಿಯೊಂದಿಗೆ ಮಗುವನ್ನು ಸಾಕುತ್ತಿದ್ದನು. ಹಲವು ಬಾರಿ ಮಗುವನ್ನು ನಮಗೆ ವಾಪಸ್ಸು ನೀಡಿ, ನಾವೇ ಸಾಕುವುದಾಗಿ ಅತ್ತೆ ತಿಳಿಸಿದ್ದರು.

ಆದರೆ, ಅತ್ತೆಗೆ ಮಗುವನ್ನು ಒಪ್ಪಿಸದೆ ಅದನ್ನು ಸಾಕಲು ಆಗುತ್ತಿಲ್ಲವೆಂದು ಕೆರೆಗೆ ಎಸೆದು ಕೊಂದೇ ಬಿಟ್ಟಿದ್ದಾನೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣಾ ಪೊಲೀಸರು, ಆರೋಪಿ ಗಣೇಶ್​ನನ್ನು ಬಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular