ಮೈಸೂರು: ಚಾಮುಂಡಿ ಬೆಟ್ಟದತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆದಸರಾಕ್ರೀಡಾಜ್ಯೋತಿಯನ್ನು ಬರಮಾಡಿಕೊಂಡು ಬೀಳ್ಕೊಡಲಾಯಿತು.ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಶ್ರೀಮಠದ ಸಿಬ್ಬಂದಿವರ್ಗದವರುಗಳಿದ್ದಾರೆ.
ನಾಡಹಬ್ಬದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದದಸರಾಕ್ರೀಡಾಕೂಟಕ್ಕೆಶ್ರೀ ಚಾಮುಂಡೇಶ್ವರಿ ದೇವಸ್ಥಾನದಿಂದ ಪ್ರಾರಂಭಗೊಂಡ ಕ್ರೀಡಾಜ್ಯೋತಿ ಯಾತ್ರೆಯು ಮೈಸೂರು ಶ್ರೀ ಸುತ್ತೂರು ಮಠಕ್ಕೆ ಆಗಮಿಸಿತ್ತು. ಶ್ರೀಮಠದಲ್ಲಿ ದಸರಾ ಕ್ರೀಡಾಜ್ಯೋತಿಯನ್ನು ಗೌರವಪೂರ್ವಕವಾಗಿ ಸ್ವಾಗತಿಸಿ ಬೀಳ್ಕೊಡಲಾಯಿತು. ಕ್ರೀಡಾಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರಿಗೆ ಶ್ರೀಮಠದಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.