Sunday, April 20, 2025
Google search engine

Homeರಾಜ್ಯಸುದ್ದಿಜಾಲಮಕ್ಕಳ ಹಕ್ಕುಗಳ ಬಲವರ್ಧನೆಗೆ ಆದ್ಯತೆ ನೀಡಿ: ಶೇಖರಗೌಡ ರಾಮತ್ನಾಳ

ಮಕ್ಕಳ ಹಕ್ಕುಗಳ ಬಲವರ್ಧನೆಗೆ ಆದ್ಯತೆ ನೀಡಿ: ಶೇಖರಗೌಡ ರಾಮತ್ನಾಳ

ಧಾರವಾಡ :ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಬಲವರ್ಧನೆಗೆ ಎಲ್ಲ ಇಲಾಖೆ ಅಧಿಕಾರಿಗಳು ಆದ್ಯತೆ ನೀಡಬೇಕು. ಮಕ್ಕಳ ಹಕ್ಕುಗಳ ಗ್ರಾಮಸಭೆಯು ಮಕ್ಕಳಲ್ಲಿ ಜೀವನದ ಭರವಸೆಯನ್ನು ಮೂಡಿಸವಂತೆ ಸಂಘಟಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು ಹೇಳಿದರು.

ಅವರು ಇಂದು (ಅ.19) ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪೆÇಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು. ಮಕ್ಕಳನ್ನು ಇಂದು ಮುಖ್ಯ ವಾಹಿನಿಗೆ ತರುವುದು ಅಗತ್ಯವಿದೆ. ಮಕ್ಕಳ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಕಾನೂನುಗಳನ್ನು ರೂಪಿಸಿವೆ. ಆದರೆ ಅನುμÁ್ಠನಕ್ಕೆ ತರುವ ಅಧಿಕಾರಿ, ಸಿಬ್ಬಂದಿಗಳಲ್ಲಿ ಕಳಕಳಿ, ಕಾಳಜಿ ಮತ್ತು ಬದ್ಧತೆ ಇರಬೇಕು. ಕಾಟಾಚಾರಕ್ಕೆ ದಾಖಲಾತಿಗಾಗಿ ಮಕ್ಕಳ ಕೆಲಸ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚಿಸಬೇಕು. ಇದನ್ನು ತರುವ ಜವಾಬ್ದಾರಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳದ್ದಾಗಿದೆ. ಪ್ರತಿ ಸರಕಾರಿ, ಖಾಸಗಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕ್ಲಬ್ ಸ್ಥಾಪಿಸಬೇಕು. ಕ್ಲಬ್ ಆರಂಭಿಸಿ, ಕ್ರಿಯಾಶೀಲಗೊಳಿಸುವುದು ಶಾಲಾ ಮುಖ್ಯಸ್ಥರ ಕರ್ತವ್ಯವಾಗಿದೆ. ಪ್ರತಿ ಅಧಿಕಾರಿ ತಮ್ಮ ಕರ್ತವ್ಯ ವ್ಯಾಪ್ತಿಯಲ್ಲಿ ಮಕ್ಕಳ ಹಿತರಕ್ಷಣೆಗಾಗಿ ಮನಃಪೂರ್ವಕವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ನವೆಂಬರ್ 14 ರಿಂದ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಹಕ್ಕುಗಳ ಜಾಗೃತಿಗಾಗಿ ಮಕ್ಕಳ ಗ್ರಾಮಸಭೆ ಸಂಘಟಿಸಿ, ಯಶಸ್ವಿಗೊಳಿಸಬೇಕು. ಮಕ್ಕಳ ಗ್ರಾಮ ಸಭೆಗೂ ಮೊದಲು ಪೂರ್ವಭಾವಿ ಸಭೆ ಜರುಗಿಸಿ, ಮಕ್ಕಳ ಗ್ರಾಮ ಸಭೆ ಕುರಿತು ಅಧಿಕಾರಿಗಳಲ್ಲಿ, ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಯಶಸ್ವಿಯಾಗಿ ಜಾರಿ ಆಗುತ್ತಿದೆ. ವಿಶೇಷ ಪಾಲನಾ ಯೋಜನೆಯಡಿ 398 ಮಕ್ಕಳಿಗೆ ಪ್ರತಿ ತಿಂಗಳು ರೂ.1,000/-ಗಳ ಶಿಷ್ಯವೇತನ ನೀಡಲಾಗುತ್ತದೆ. ಪ್ರಾಯೋಜಕತ್ವ ಯೋಜನೆಯಡಿ 383 ಮಕ್ಕಳಿಗೆ, ಉಪಕಾರ ಯೋಜನೆಯಡಿ 21 ಮಕ್ಕಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಂಗಾಧರ ಕಂದಕೂರ, ಪ್ರಶಾಂತ ತುರಕಾನಿ, ಭಾಗ್ಯಶ್ರೀ ಜಾಗೀರದಾರ, ಪರುಶರಾಮ ಸಾವಂತ, ರಾಮಚಂದ್ರ ಹೊಸಮನಿ ಹಾಗೂ ಮಕ್ಕಳ ರಕ್ಷಣಾ ಸಾಂಸ್ಥಿಕ ಅಧಿಕಾರಿ ಅಶ್ವಿನಿ ಉಳ್ಳಿಗೇರಿ, ಅಸಾಂಸ್ಥಿಕ ಅಧಿಕಾರಿ ಪ್ರಕಾಶ ಕೊಡ್ಲಿವಾಡ, ಕಾನೂನು ಸಲಹೆಗಾರ ನ್ಯಾಯವಾದಿ ನೂರಜಹಾನ ಕಿಲ್ಲೆದಾರ, ಸಮಾಜ ಕಾರ್ಯಕರ್ತರಾದ ಕರೆಪ್ಪ ಕೌಜಲಗಿ, ಶ್ವೇತಾ ಕಿಲ್ಕೆದಾರ, ಆಪ್ತ ಸಮಾಲೋಚಕಿ ವಿಶಾಲ ಕಾನಪೇಟ, ಕ್ಷೇತ್ರಕಾರ್ಯಕರ್ತ ಅಲಿ ತಹಸಿಲ್ದಾರ, ಶಂಕರ ಬೋಸ್ಲೆ ಹಾಗೂ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ ಪಿಡಿಓಗಳು, ಕಾರ್ಯದರ್ಶಿಗಳು, ಸಿಅರ್.ಸಿ, ಬಿಆರ್.ಸಿ ಗಳು ಮತ್ತು ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular