ಮಂಡ್ಯ: ವಿಜಯ್ ನಟನೆಯ ಲಿಯೋ ತಮಿಳು ಆವೃತ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಮಂಡ್ಯದ ಮಹವೀರ ಚಿತ್ರಮಂದಿರದ ಮಾಲೀಕರಿಗೆ ಕನ್ನಡ ಆವೃತ್ತಿಯನ್ನೆ ಪ್ರದರ್ಶಿಸುವಂತೆ ಮನವರಿಕೆ ಮಾಡಿಕೊಡಲಾಯಿತು.
ಸ್ವತ ವರನಟ ರಾಜಕುಮಾರ್ ಈ ಚಿತ್ರಮಂದಿರವನ್ನು ಉದ್ಘಾಟಿಸಿದ್ದರು. ಕನ್ನಡ ಸಿನಿಮಾಗಳಿಂದಲೆ ಅಸ್ತಿತ್ವ ಉಳಿಸಿಕೊಂಡ ಈ ಚಿತ್ರಮಂದಿರಗಳು ಬೆರಳೆಣಿಕೆಯ ವಿತರಕರ ಪರವಾಗಿ ತಮಿಳು ಆವೃತ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ನಾಚಿಕೆಗೇಡಿನ ಸಂಗತಿ ಎಂದು ಕನ್ನಡ ಪರ ಸಂಘಟನೆಗಳು ಆರೋಪಿಸಿದ್ದಾರೆ.