ಚಾಮರಾಜನಗರ: ಬ್ರಾಹ್ಮಿ ಮಹಿಳಾ ಸಂಘ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನವರಾತ್ರಿ ಸಂಭ್ರಮ, ನವಕನ್ನಿಕಾ ಪೂಜಾ ಕಾರ್ಯಕ್ರಮ, ಲಲಿತ ಸಹಸ್ರನಾಮ ಪಾರಾಯಣ , ಹಾಗೂ ಭಾರತೀಯ ಸಂಸ್ಕೃತಿ ಮತ್ತು ದಸರಾ ವಿಶೇಷ ಉಪನ್ಯಾಸವನ್ನು ಅ.21ರ ಶನಿವಾರ ಸಂಜೆ 5:30ಕ್ಕೆ ಶಂಕರಪುರದ ಋಗ್ವೇದಿ ಕುಟೀರ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಬ್ರಾಹ್ಮಿ ಮಹಿಳಾ ಸಂಘದ ಅಧ್ಯಕ್ಷರಾದ ರಾಧಾ ಮತ್ತು ಕಾರ್ಯದರ್ಶಿ ನಂದಿನಿ , ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ಮಾಹಿತಿ ನೀಡಿದ್ದಾರೆ.