ತುಮಕೂರು: ಕಲಬುರಗಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣವನ್ನು ತನಿಖೆಗೆ ಸಿಐಡಿಗೆ ಆದೇಶ ಮಾಡಿದೆ. ತನಿಖಾ ವರದಿ ಬಂದ ಮೇಲೆ ಸತ್ಯಾಂಶ ಗೊತ್ತಾಗುತ್ತೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಅವರ್ಯಾರು ಸಚಿವರು ಇನ್ವಾಲ್ವ್ ಆಗಿದ್ದಾರೆ ಅಂತಾ ಹೇಳಿಕೆ ಕೊಡ್ತಾ ಇದ್ದಾರೆ. ಅದನ್ನ ವೆರಿಫೈ ಮಾಡಬೇಕಲ್ವಾ, ಸಿಐಡಿ ವೆರಿಫೈ ಮಾಡಿ ತನಿಖೆ ಮಾಡ್ತಾರೆ. ಆಮೇಲೆ ಸತ್ಯಾಂಶ ಗೊತ್ತಾಗುತ್ತೆ ಎಂದರು.
ಯಾರ್ಯಾರೋ ಹೇಳಿಕೆ ಕೊಡ್ತಾರೆ ಅಂದ್ರೆ ಆ ಹೇಳಿಕೆನೂ ತನಿಖೆಯಲ್ಲಿ ತಗೋಬೇಕಾಗುತ್ತೆ.ಅದನ್ನ ಪರಿಶೀಲನೆ ಮಾಡಿ ಅಂತಾನೆ ಸಿಐಡಿಗೆ ಕೊಟ್ಟಿರೋದು. ವರದಿ ಏನ್ ಬರುತ್ತೆ ನೋಡಿಕೊಂಡು ಮುಂದುವರೆಯುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.