Sunday, April 20, 2025
Google search engine

Homeರಾಜ್ಯಮಂಗಳೂರು: ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

ಮಂಗಳೂರು: ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

ಮಂಗಳೂರು(ದಕ್ಷಿಣ ಕನ್ನಡ): ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕಾಮಾಜೆ ಸಮೀಪದ ಮಿತ್ತಕೋಡಿ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ‌ಕಡೇಶ್ವಾಲ್ಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಸಚಿನ್ (24) ಎಂದು ಗುರುತಿಸಲಾಗಿದೆ.

ಬಂಟ್ವಾಳದ ಇಲೆಕ್ಟ್ರಿಕಲ್ ಕಂಪೆನಿಯಲ್ಲಿ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸಚಿನ್ ಮೊನ್ನೆ ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬಾರದೆ ಹಿನ್ನೆಲೆಯಲ್ಲಿ ಈತನಿಗಾಗಿ ಮನೆಯವ್ರು ಹುಡುಕಾಟ ನಡೆಸಿದ್ದಾರೆ. ಈ‌ ಮಧ್ಯೆ ಈತನ ಸ್ಕೂಟರ್ ಕಾಮಾಜೆ ಬಳಿ ಕಂಡುಬಂದಿದ್ದು ಪಕ್ಕದ ಗುಡ್ಡದಲ್ಲಿ ಶವ ಪತ್ತೆಯಾಗಿದೆ.

ಆತ್ಮಹತ್ಯೆ ಮಾಡುವ ಮೊದಲು ಈತ ಚೀಟಿಯನ್ನು ಬರೆದು ಕಿಸೆಯಲ್ಲಿಟ್ಟಿದ್ದು ಪ್ರೇಮ ವೈಫಲ್ಯ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಈತ ಚೀಟಿಯಲ್ಲಿ ಬರೆದಿದ್ದ ಎಂದು ಹೇಳಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular