Sunday, April 20, 2025
Google search engine

Homeಸ್ಥಳೀಯಮೈಸೂರು ಅರಮನೆಯಲ್ಲಿ ಯದುವೀರ್‌ರಿಂದ ಸರಸ್ವತಿ ಪೂಜೆ

ಮೈಸೂರು ಅರಮನೆಯಲ್ಲಿ ಯದುವೀರ್‌ರಿಂದ ಸರಸ್ವತಿ ಪೂಜೆ

ಮೈಸೂರು: ಶರನ್ನವರಾತ್ರಿಯ ೬ನೇ ದಿನವಾದ ಶುಕ್ರವಾರ ಮೈಸೂರು ಅರಮನೆಯಲ್ಲಿ ವಿದ್ಯಾದೇವತೆ ಸರಸ್ವತಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಿಗ್ಗೆ ೧೦.೫ ರಿಂದ ೧೦.೨೫ ರ ಶುಭ ಲಗ್ನದಲ್ಲಿ ಪೂಜೆ ನೆರವೇರಿಸಿದರು. ಅರಮನೆಯ ರಾಜಪುರೋಹಿತರ ಸಮ್ಮುಖದಲ್ಲಿ ಸರಸ್ವತಿ ವಿಗ್ರಹವಿಟ್ಟು ಪುರಾತನ ಕಾಲದ ವೀಣೆ, ಧಾರ್ಮಿಕ ಗ್ರಂಥಗಳಿಗೆ ಪೂಜೆ ನೆರವೇರಿಸಲಾಯಿತು.

ಪುರೋಹಿತರು ವೇದಘೋಷಗಳ ಮಾಡಿದರು. ತಂದೆಯ ಪಕ್ಕದಲ್ಲಿ ಮಗ ಆದ್ಯವೀರ್ ನರಸಿಂಹರಾಜ ಒಡೆಯರ್ ಭಾಗವಹಿಸಿದ್ದರು. ನಾಳೆ ಶನಿವಾರ ಅ.೨೧ ಕಾಳರಾತ್ರಿ ಪೂಜೆ, ಅಕ್ಟೋಬರ್ ೨೨ರಂದು ಭಾನುವಾರ ದುರ್ಗಾಷ್ಠಮಿ ಪೂಜೆ, ಸೋಮವಾರ ಅಕ್ಟೋಬರ್ ೨೩ರಂದು ಸಾಂಪ್ರದಾಯಿಕ ಆಯುಧ ಪೂಜೆ ಹಾಗೂ ಅಕ್ಟೋಬರ್ ೨೪ರ ಮಂಗಳವಾರ ವಿಜಯ ದಶಮಿ ಪೂಜೆ ನೆರವೇರಲಿದೆ. ಈ ಮೂಲಕ ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಸಂಪನ್ನಗೊಳ್ಳಲಿವೆ.

RELATED ARTICLES
- Advertisment -
Google search engine

Most Popular