Monday, April 21, 2025
Google search engine

Homeರಾಜ್ಯವೇಗದ ಚಾಲನೆ: ಉರುಳಿ ಬಿದ್ದ ಕಾರು

ವೇಗದ ಚಾಲನೆ: ಉರುಳಿ ಬಿದ್ದ ಕಾರು

ಮಂಗಳೂರು(ದಕ್ಷಿಣ ಕನ್ನಡ): ವೇಗದಲ್ಲಿ ಚಲಿಸುತ್ತಿದ್ದ ಕಾರೊಂದು ಉರುಳಿ ಬಿದ್ದ ಘಟನೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಸೇತುವೆ ಬಳಿ‌ ನಡೆದಿದೆ.

ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ, ಕಾರು ಚಾಲಕ ಬಂಟ್ವಾಳ ಜೋಡುಮಾರ್ಗದ ಪಿಎಸ್ ಮುಹಮ್ಮದ್ ವಿರುದ್ಧ ಬಜ್ಪೆ ಪೊಲೀಸರು ದುಡುಕು ಮತ್ತು ನಿರ್ಲಕ್ಷ್ಯದ ಚಾಲನೆಯ ಆರೋಪ ಹೊರಿಸಿ 3 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿ ಬಿದ್ದಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

RELATED ARTICLES
- Advertisment -
Google search engine

Most Popular