Sunday, April 20, 2025
Google search engine

Homeರಾಜ್ಯಸುದ್ದಿಜಾಲಗ್ಯಾರಂಟಿ ಯೋಜನೆಯಿಂದ ತಾಲೂಕು ಅಭಿವೃದ್ಧಿ ಕುಂಠಿತ-ಶಾಸಕ ಜಿ.ಡಿ.ಹರೀಶ್ ಗೌಡ ಬೇಸರ

ಗ್ಯಾರಂಟಿ ಯೋಜನೆಯಿಂದ ತಾಲೂಕು ಅಭಿವೃದ್ಧಿ ಕುಂಠಿತ-ಶಾಸಕ ಜಿ.ಡಿ.ಹರೀಶ್ ಗೌಡ ಬೇಸರ

ಹುಣಸೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಿಂದ ತಾಲೂಕು ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಕಿರಂಗೂರು ಗ್ರಾಮದಲ್ಲಿ ಸುಮಾರು 4 ಕೋಟಿ ವ್ಯೆಚ್ಚದ ನಬಾರ್ಡ್ ಯೋಜನೆಯಡಿ ಕಿರಂಗೂರಿನಿಂದ ಅಂಬೇಡ್ಕರ್ ನಗರ, ಹರಳಹಳ್ಳಿ ಗ್ರಾಮದವರೆಗೆ ರಸ್ತೆಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನನ್ನು ತಾಲೂಕಿನ ಜನತೆ ಪ್ರೀತಿಯಿಂದ ಗೆಲ್ಲಿಸಿದ್ದೀರಿ ಆ ಋಣ ನನ್ನ ಮೇಲಿದೆ. ತಾಲೂಕಿನ ಅಭಿವೃದ್ಧಿ ಕೂಡ ನನ್ನ ಜವಾಬ್ದಾರಿ ಎಂದರು.

ಹನಗೋಡು ಭಾಗದ ನಾಗರಹೊಳೆ ಕಾಡಂಚಿನ ಹಲವಾರು ಗ್ರಾಮಗಳ ರಸ್ತೆಗಳ ಅಭಿವೃದ್ಧಿ ಅವಶ್ಯಕತೆ ಇದೆ. ಆದರೆ ಈಗಿನ ಕಾಂಗ್ರೆಸ್ ಸರಕಾರ. ತಮ್ಮ ಗೆಲವಿಗಾಗಿ ಗ್ಯಾರಂಟಿ ಭಾಗ್ಯಗಳನ್ನು ನೀಡುವ ಬರವಸೆ ನೀಡಿ. ಈಗ 200 ಯುನಿಟ್ ವಿದ್ಯುತ್ ಇಲ್ಲ, ಮಹಿಳೆಯರಿಗೆ 2 ನೇ ಗೃಹ ಲಕ್ಷ್ಮಿ ಯೋಜನೆಯ ಹಣವೂ ಇಲ್ಲ. ಇನ್ನು ಗ್ರಾಮೀಣ ಭಾಗದ ರೈತರಿಗೆ ಹೊಸ ಯೋಜನೆಯ ಟಿಸಿನೂ ಇಲ್ಲ. ದಿನ ಪೂರ್ತಿ ಲೋಡ್ ಶೆಡ್ಡಿಂಗ್. ಮತದಾರ ಇವನ್ನು ಬಿಟ್ಟಿ ಕೊಡಿ ಎಂದೇನು ಕೇಳಿರಲಿಲ್ಲ. ವಾಸ್ತವವನ್ನು, ಜನರ ಭಾವನೆಗಳನ್ನು ಸರಕಾರ ಹರಿಯಬೇಕಿದೆ ಎಂದರು.

ಈ ಭಾಗದಲ್ಲಿ ರೈತರ ಭೂಮಿ ಕೂಡ ಕಾಡಂಚಿನಲ್ಲಿರುವುದರಿಂದ, ರೈತರಿಗೆ ಬರಿ ವಿದ್ಯುತ್ ಸಮಸ್ಯೆ ಮಾತ್ರ ಇಲ್ಲ, ಇತ್ತೀಚೆಗೆ ಹುಲಿ,ಚಿರತೆ ಕಾಡಾನೆ, ಕಾಟದಿಂದ ನೊಂದಿದ್ದಾರೆ.ಇದರ ಜತೆಗೆ ಟಿಸಿ ವಿಚಾರದಲ್ಲಿ ಹೊಸ ನಿರ್ಣಯ ಜಾರಿ ಮಾಡಿರುವುದು ರೈತರಿಗೆ ಅನ್ಯಾಯ ವ್ಯಸಗಿದ್ದಾರೆ ಎಂದು ದೂರಿದರು.

ಒಟ್ಟಾರೆ ತಾಲೂಕಿನ ಸಮಗ್ರ ಅಭಿವೃದ್ಧಿ ಯಾಗಬೇಕಾದರೆ ನೀವು ನಮ್ಮೊಂದಿಗೆ ಇದ್ದರೆ ಸಾಕು. ಯಾವುದೇ ಸಮಸ್ಯೆ ಎದುರಾದರೂ ಎದುರಸಬಹುದು. ಸಹಕಾರ ಕ್ಷೇತ್ರದಲ್ಲಿ ಸ್ವಚಂದವಾಗಿ ಅಧಿಕಾರ ನಡೆಸಿದರು ನಮ್ಮ ಮೇಲೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಆದರೆ ಸತ್ಯ ಎಂದೂ ಸೋಲುವುದಿಲ್ಲ ಎಂಬ ನಂಬಿಕೆ ಇದೆ ಅದಕ್ಕೆ ಸಹಕಾರ ಇರಲಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ. ಗ್ರಾ.ಪಂ ಅಧ್ಯಕ್ಷ ಮಧು, ಉಪಾಧ್ಯಕ್ಷ ಅಣ್ಯಯ್ಯ, ಡೇರಿ ಅಧ್ಯಕ್ಷ ಚನ್ನಕೇಶವ್, ಸ್ವಾಮಿಗೌಡ, ಬಸವರಾಜು, ಜೆಡಿಎಸ್ ಮುಖಂಡ ಎಚ್.ಆರ್.ರಮೇಶ್, ಹನಗೋಡು ಸಹಕಾರ ಬ್ಯಾಂಕ್ ಅಧ್ಯಕ್ಷ ರವಿಕುಮಾರ್ (ಹನುಮ) ಹನಗೋಡ್ ಗ್ರಾ.ಪಂ. ಅಧ್ಯಕ್ಷ ಚನ್ನಯ್ಯ, ಗ್ರಾ.ಪಂ.ಸದಸ್ಯ ರಾಮೇಗೌಡ, ರಾಜ, ಪಿ.ಡಿಒ ಮಹೇಶ್, ಎ ಇ ಇ ಬೋಜರಾಜ, ಪ್ರಭಾಕರ್ ಇದ್ದರು.

RELATED ARTICLES
- Advertisment -
Google search engine

Most Popular