ಚಾಮರಾಜನಗರ: ಪತಿಯೊಬ್ಬ ಹಣಕಾಸಿನ ವಿಚಾರಕ್ಕೆ ಪತ್ನಿಯ ತಲೆಗೆ ಆಯುಧವೊಂದರಿಂದ ಹೊಡೆದು ಕೊಂದುಹಾಕಿರುವ ಘಟನೆ ತಾಲೂಕಿನ ಮಂಗಲ ಹೊಸೂರು ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು ಮೂಲದ ರಾಧಿಕಾ ಮೃತ ಮಹಿಳೆ, ತಮಿಳುನಾಡು ಮೂಲದವರಾದ ಕಾರ್ತಿಕ್ ಮತ್ತು ರಾಧಿಕಾ ದಂಪತಿ ತಾಲೂಕಿನ ಮಂಗಲ ಹೊಸೂರು ಗ್ರಾಮದಲ್ಲಿ ಜಮೀನೊಂದನ್ನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ಕೈಗೊಂಡಿದ್ದರು. ಶನಿವಾರ ರಾತ್ರಿ ಹಣಕಾಸಿನ ವಿಚಾರವಾಗಿ ಪತಿ, ಪತ್ನಿ ನಡುವೆ ಜಗಳ ನಡೆದು, ಪತಿ ಕಾರ್ತಿಕ್ ಪತ್ನಿ ರಾಧಿಕಾಳ ತಲೆಗೆ ಆಯುಧವೊಂದರಿಂದ ಬಲವಾಗಿ ಹೊಡೆದ ಪರಿಣಾಮ ಪತ್ನಿ ರಾಧಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಈ ದಂಪತಿಗೆ ೧೦ ತಿಂಗಳ ಹೆಣ್ಣು ಮಗುವಿದೆ.
ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇಸ್ಪೆಕ್ಟರ್ ಬಸವರಾಜ್, ಸಬ್ ಇಸ್ಪೆಕ್ಟರ್ ರಾಜುದ್ದೀನ್ ಹಾಗೂ ಸಿಬ್ಬಂದಿ ಆಗಮಿಸಿ, ಆರೋಪಿ ಕಾರ್ತಿಕ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.