ಹನೂರು : ಡಾ. ಬಿ.ಆರ್. ಅಂಬೇಡ್ಕರ್ ಅವರ ದೀಕ್ಷಾಭೂಮಿ ಯಾತ್ರೆಗೆ ಹನೂರು ಪಟ್ಟಣದಲ್ಲಿ ಶಾಸಕ ಮಂಜುನಾಥ್ ಚಾಲನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳಿಗೆ ಆಯೋಜಿಸಲಾಗಿರುವ ಮಹಾರಾಷ್ಟ್ರದ ನಾಗಪುರಕ್ಕೆ ‘ದೀಕ್ಷಾ ಭೂಮಿ ಯಾತ್ರೆಗೆ’ ಇಂದು ಭಾನುವಾರದಂದು ಹಸಿರು ನಿಶಾನೆ ತೋರಿ ಚಾಲನೆ ನೀಡಿ ಬಳಿಕ ಮಾತಾನಾಡಿದ ಅವರು
ಡಾ.ಅಂಬೇಡ್ಕರ್ ಅವರು ೧೯೫೬ರ ಅಶೋಕ ವಿಜಯದಶಮಿಯ ದಿನ ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಸ್ಮರಣೆಯ ನಿಮಿತ್ತ ದೀಕ್ಷಾಭೂಮಿ ಯಾತ್ರೆ ಜರುಗುತ್ತದೆ. ದೀಕ್ಷಾಭೂಮಿಯು ಭಾರತದ ಮಹಾರಾಷ್ಟ್ರ ರಾಜ್ಯದ ನಾಗಪುರ ನಗರದಲ್ಲಿ ನೆಲೆಗೊಂಡಿರುವ ನವಯಾನ ಬೌದ್ಧಧರ್ಮದ ಪವಿತ್ರ ಸ್ಮಾರಕವಾಗಿದೆ. ಇಲ್ಲಿಗೆ ತೆರಳುವ ಯಾತ್ರಾತ್ರಿಗಳಿಗೆ ಸರ್ಕಾರದಿಂದ ಕಳಿಸಕೂಡಲಾಗುತ್ತಿದ್ದು ಮುಂದಿನ ದಿನದ ಕ್ಷೇತ್ರದ ಹೆಚ್ಚಿನ ಜನತೆ ಸದುಪಯೋಗಪಡಿಸಿಕೂಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿಡಿಎಸ್ ಎಸ್ ಸಂಚಾಲಕ ದೂಡ್ಡಿಂದುವಾಡಿ ಸಿದ್ದರಾಜು ಚಲವಾಧಿ ಮಹಾಸಭಾ ಅದ್ಯಕ್ಷ ಬಸವರಾಜು ಹಾಗೂ ಸಿದ್ದರಾಜು ಪ್ರಕಾಶ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.