ಮೈಸೂರು: ಶ್ರೀ ಸುತ್ತೂರು ಮಠದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷಪೂಜೆಗಳು ನೆರವೇರುತ್ತಿವೆ. ಅ.೨೪ ಮಂಗಳವಾರ ವಿಜಯ ದಶಮಿಯಂದು ಶ್ರೀ ಚಾಮುಂಡಿ ಪಾದದ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಬನ್ನಿ ಪೂಜೆಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ. ಮುಖ್ಯಮಂತ್ರಿಗಳು ಬೆಳಗ್ಗೆ ೮.೩೦ಕ್ಕೆ, ಉಪಮುಖ್ಯಮಂತ್ರಿಗಳು ಮಧ್ಯಾಹ್ನ೧.೩೦ಕ್ಕೆ ಹಾಗೂ ರಾಜ್ಯಪಾಲರು ಸಂಜೆ ೪ಕ್ಕೆ ಆಗಮಿಸುತ್ತಿದ್ದಾರೆ.ಸಚಿವರುಗಳು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಭಕ್ತಾದಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಪೂಜ್ಯರಿಂದ ಬನ್ನಿ ಆಶೀರ್ವಾದ ಪಡೆಯಲುಕೋರಿದೆ.