ಮೈಸೂರು: ನಾಡಿನ ಸಮಸ್ತ ಜನತೆಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು. ಬೊಂಬೆಗಳನ್ನು ಇಟ್ಟು ಪೂಜಿಸುವುದರಿಂದ ನಾಡಿನ ಸಂಸ್ಕೃತಿ, ಸಂಸ್ಕಾರ ಹಾಗೂ ಕಲೆಯನ್ನು ಬಿಂಬಿಸುತ್ತದೆ.ಈ ದಸರಾ ಹಬ್ಬ ವಿಶ್ವ ವಿಖ್ಯಾತವಾಗಿದ್ದು ನಮ್ಮ ದೇಶದಲ್ಲಿ ದಸರಾ ಹಬ್ಬದ ಪ್ರಯುಕ್ತ ಬೊಂಬೆಗಳ ಪ್ರದರ್ಶನ ಮಾಡಿ ಆಸಕ್ತರು ಪೂಜೆಯನ್ನು ಮಾಡುತ್ತಾರೆ.ಈ ಅಶ್ವಿಜ ಮಾಸದಲ್ಲಿ ಬೊಂಬೆಗಳ ಪ್ರದರ್ಶನವನ್ನು ಪಾಡ್ಯದಿಂದ ವಿಜಯದಶಮಿ ವರೆಗೂ ಆಸಕ್ತರು ಮನೆಯಲ್ಲಿ ಗೊಂಬೆಗಳನ್ನು ಇಟ್ಟು ಪ್ರತಿ ದಿನ ನೈವೇದ್ಯ ಮಾಡಿ ಹಣ್ಣು ಕಾಯಿ ಇಟ್ಟು ಪೂಜಿಸುತ್ತಾರೆ .
ಹಿರಿಯರು ಹೇಳಿರುವಂತೆ ನವರಾತ್ರಿಯಲ್ಲಿ ಬೊಂಬೆಗಳಿಗೂ ಜೀವ ಬಂದು ಎಲ್ಲರಿಗೂ ಆಶೀರ್ವಾದ ಮಾಡುತ್ತದೆ ಎಂದು ಪ್ರತೀತಿ ಅನಾದಿಕಾಲದಿಂದಲೂ ಬೊಂಬೆಗಳನ್ನು ನಾಡಿನ ಜನ ಪೂಜೆ ಮಾಡುತ್ತಿರುವುದು ತಿಳಿದುಬಂದಿರುತ್ತದೆ. ನಾನು ಕೂಡ ಸುಮಾರು ೪೦ ವರ್ಷದಿಂದ ಈ ಬೊಂಬೆಗಳನ್ನು ಇಟ್ಟು ಪೂಜೆಯನ್ನು ಮಾಡಿಕೊಂಡು ಬಂದಿರುತ್ತೇನೆ.ಹಾಗೂ ಬೊಂಬೆಗಳನ್ನು ನೋಡಲು ಬಂದವರಿಗೆ ಹರಿಶಿನ ಕುಂಕುಮ ಕೊಟ್ಟು ಆಶೀರ್ವಾದವನ್ನು ಕೂಡ ಪಡೆಯುತ್ತೇನೆ. ಸಮಸ್ತ ನಾಡಿನ ಜನರಿಗೆ ಬೊಂಬೆಗಳ ಪ್ರದರ್ಶನದಿಂದ ಒಳ್ಳೆಯದು ಆಗಲಿ ಎಂದು ಹಾರೈಸುತ್ತೇನೆ.
ನಾನು ಕಳೆದ ೧೫ ದಿನಗಳಿಂದಲೇ ಗೊಂಬೆ ಕೂರುಸಲು ಸಿದ್ಧತೆ ಮಾಡಿಕೊಂಡಿದ್ದು ನಮ್ಮ ಮನೆಯಲ್ಲಿ ಜೋಪಾನವಾಗಿ ಇಟ್ಟಿದ್ದ ಬೊಂಬೆಗಳನ್ನು ಸ್ವಚ್ಛಗೊಳಿಸಿ ನವರಾತ್ರಿಯ ಮೊದಲನೇ ದಿನ ಮನೆಯ ವರಂಡದಲ್ಲಿ ಜೋಡಿಸುತ್ತಿರುತ್ತೇನೆ.
ಕುದುರೆ ಸಾರೋಟು, ಪಟ್ಟದ ಆನೆ, ಗೋಪಿಕಾಶ್ರೀಯರು, ಮಂಗಳವಾದ್ಯ ನುಡಿಸುತ್ತಿರುವ ಗೊಂಬೆಗಳು, ಜೋಡಿ ಗೊಂಬೆ, ನಾಯಿ, ಹಸು, ಅರಮನೆಯ ಕಲಾ ಕೃತಿ, ಹೀಗೆ ಸಾಕಷ್ಟು ಬೊಂಬೆಗಳನ್ನು ಜೋಡಿಸಿ ಇಟ್ಟಿರುತ್ತೇನೆ ಹಾಗೂ ವಿಶೇಷವಾಗಿ ಮಂಗಳ ಗೌರಿ,ನಾಲ್ಕು ಕುದುರೆಗಳ ಸಾರೋಟು, ಶ್ರೀ ಕೃಷ್ಣ ,ಸಮವಸ್ತ್ರ ತೊಟ್ಟ ಮಕ್ಕಳು, ಅರಿಶಿನ ಕುಂಕುಮ ಬಟ್ಟಲು, ಶ್ರೀ ಕೃಷ್ಣನ ಬಾಲ ಲೀಲೆ, ಮುಂತಾದ ಬೊಂಬೆಗಳು ಕೂಡ ಸಂಗ್ರಹ ಮಾಡಿರುತ್ತೇನೆ. ಈ ರೀತಿಯ ವಿಶೇಷವಾದ ವಿಜಯದಶಮಿಯು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಮರಿಗೌಡ ರ ಮನೆಯಲ್ಲಿ ಪ್ರತಿ ವರ್ಷ ನಡೆಯುತ್ತದೆ.