Sunday, April 20, 2025
Google search engine

Homeಸ್ಥಳೀಯಮೈಸೂರು ಅರಮನೆಯ ಐಷಾರಾಮಿ ಕಾರುಗಳಿಗೆ ಆಯುಧ ಪೂಜೆ

ಮೈಸೂರು ಅರಮನೆಯ ಐಷಾರಾಮಿ ಕಾರುಗಳಿಗೆ ಆಯುಧ ಪೂಜೆ

ಮೈಸೂರು: ಮೈಸೂರಿನ ರಾಜವಂಶಸ್ಥರು ಬಳಸುವ ಎಲ್ಲಾ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ನೋಂದಣಿ ಸಂಖ್ಯೆ ‘೧೯೫೩’ ಆಗಿದೆ. ಮೈಸೂರಿನ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನ್ಮ ವರ್ಷ ೧೯೫೩. ಹೀಗಾಗಿ ಮೈಸೂರಿನ ರಾಜವಂಶಸ್ಥರು ಬಳಸುವ ಎಲ್ಲ ಕಾರುಗಳ ಸಂಖ್ಯೆ ಒಂದೇ ಆಗಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಕಾರುಗಳೆಂದರೆ ತುಂಬಾ ಇಷ್ಟವಂತೆ. ಅವರ ಬಳಿ ದುಬಾರಿ ಬೆಲೆಯ ಹಲವು ಕಾರುಗಳಿದ್ದವು. ಆ ಎಲ್ಲಾ ಕಾರುಗಳಿಗೂ ೧೯೫೩ ಸಂಖ್ಯೆಯ ಒಂದೇ ನಂಬರ್ ಅನ್ನು ಬಳಸಲಾಗುತ್ತದೆ. ಇದರ ಜತೆಗೆ ರಾಜಲಾಂಛನ ಗಂಡಭೇರುಂಡ ಚಿಹ್ನೆಯನ್ನು ಪ್ರತಿಯೊಂದು ಕಾರಿಗೂ ಹಾಕಲಾಗಿದೆ. ಎಲ್ಲಾ ಕಾರುಗಳಲ್ಲಿಯೂ ಇದೇ ಸಂಖ್ಯೆ ಇಂದಿಗೂ ಮುಂದುವರೆದಿದೆ.

ರಾಜವಂಶಸ್ಥ ಯದುವೀರ್ ಒಡೆಯರ್ ಸೋಮವಾರ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದುಬಾರಿ ಬೆಲೆಯ ಕಾರುಗಳ ಸಂಖ್ಯೆ ೧೯೫೩ ವಿಶೇಷವಾಗಿ ಗಮನ ಸೆಳೆಯಿತು.

RELATED ARTICLES
- Advertisment -
Google search engine

Most Popular